Saturday, April 19, 2025
Google search engine

Homeರಾಜ್ಯಸುದ್ದಿಜಾಲಸಹಕಾರ ಸಂಘಗಳ ಏಳಿಗೆ,ಆರ್ಥಿಕ ಅಭಿವೃದ್ದಿಗೆ ಶ್ರಮಿಸಲು ಸದಾ ಬದ್ದ-ಶಾಸಕ ಡಿ.ರವಿಶಂಕರ್

ಸಹಕಾರ ಸಂಘಗಳ ಏಳಿಗೆ,ಆರ್ಥಿಕ ಅಭಿವೃದ್ದಿಗೆ ಶ್ರಮಿಸಲು ಸದಾ ಬದ್ದ-ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ: ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿರುವ ನಾನು ನನ್ನ ಅಧಿಕಾರವಧಿಯಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡದೆ ಉತ್ತಮ ಆಡಳಿತ ನೀಡುವ ಮೂಲಕ ಕ್ಷೇತ್ರದಲ್ಲಿ ಸರ್ವ ಜನಾಂಗದ ತೋಟ ನಿರ್ಮಾಣ ಮಾಡಲಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ .ದಲ್ಲಿ ಮಾತನಾಡಿದ ಅವರು ರೈತರಿಗೆ ಅನುಕೂಲ ಕಲ್ಪಿಸುತ್ತಿರುವ ಸಹಕಾರ ಸಂಘಗಳ ಏಳಿಗೆಗೆ ಮತ್ತು ಅವುಗಳ ಆರ್ಥಿಕ ಅಭಿವೃದ್ದಿಗೆ ಶ್ರಮಿಸಲು ಸದಾ ಬದ್ದನಾಗಿದ್ದು ಸರ್ಕಾರದಿಂದ ಬರುವ ಸವಲತ್ತು ಕೊಡಿಸಲಾಗುತ್ತದೆ ಎಂದರು.
ಶೇಕಡ ೭೦ ರಷ್ಟು ರೈತರಿರುವ ದೇಶ ಭಾರತ, ದೇಶದ ಬೆನ್ನೆಲು ರೈತರಾಗಿದ್ದು ಅವರುಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ ಇದನ್ನು ಅರಿತಿರುವ ನಾನು ರೈತರ ಉದ್ದಾರಕ್ಕಾಗಿ ಇರುವ ಸಹಕಾರ ಸಂಘಗಳ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಸಂಘಗಳು ವಾಣಿಜ್ಯ ಮಳಿಗೆಗಳು ಸೇರಿದಂತೆ ಆಡಳಿತ ಕಛೇರಿ ನಿರ್ಮಾಣ ಮಾಡಲು ಅವಶ್ಯಕವಿರುವ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದಕ್ಕಾಗಿ ೬೦ ಸಾವಿರ ಕೋಟಿ ರೂಗಳನ್ನು ಮೀಸಲಿರಿಸಿದೆ. ಆದ್ದರಿಂದ ಇತರ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಲು ವಿಳಂಭವಾಗುತ್ತಿದ್ದು ಮುಂದಿನ ವರ್ಷದಿಂದ ಅನುದಾನಕ್ಕೆ ಕೊರತೆ ಇಲ್ಲ ಆನಂತರ ಅಭಿವೃದ್ದಿಗೆ ಕಾರ್ಯಗಳ ಪರ್ವ ಆರಂಭವಾಗಲಿದೆ ಎಂದು ತಿಳಿಸಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು ರೈತರು ಬೆಳೆ ನಷ್ಟ ಸೇರಿದಂತೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಬರ ಎದುರಾದರೂ ರೈತ ಬಾಂಧವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ಮತ್ತು ಸವಲತ್ತುಗಳು ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ಬ್ಯಾಂಕ್‌ನಲ್ಲಿ ಸುಮಾರು ೨೭ ಕೋಟಿ ರೂ ಭ್ರಷ್ಟಾಚಾರ ನಡೆದು ಬ್ಯಾಂಕ್ ಮುಚ್ಚುವ ಸ್ಥಿತಿಗೆ ಬರುವ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದಂತರ ಶಿಫಾರಸ್ಸಿನ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದ್ಯತೆ ಕೊಟ್ಟು ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಆದೇಶ ಮಾಡಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಮಾಡಿದರೂ ಸಹ ಸರ್ಕಾರಕ್ಕೆ ಮತ್ತು ದೂರು ಕೊಟ್ಟವರಿಗೆ ಲಾಭವಾಗುವುದಿಲ್ಲ, ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಐದು ವರ್ಷದ ಅವಧಿಯಲ್ಲಿ ಲಾಭದತ್ತ ಕೊಂಡ್ಯೂಯಲ್ಲು ಶ್ರಮಿಸಿದ್ದೇನೆ, ಸುಮಾರು ೯೭೭ ಕೋಟಿಯಷ್ಟು ಹಣ ಠೇವಣಿ ಹಿಡಲು ನಮ್ಮ ಆಡಳಿತ ಮಂಡಳಿಯ ಶ್ರಮಯಿದೆ ಎಂದು ಹೇಳಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿರುವ ೨೩ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿAದ ೯೩ ಕೋಟಿ ಸಾಲವನ್ನು ೨೦೯ ಕೋಟಿ ರೂಗೆ ಏರಿಸಲಾಗಿದೆ ಇದರಿಂದ ರೈತ ಬಾಂಧವರಿಗೆ ಅನುಕೂಲವಾಗಿದ್ದು ಮುಚ್ಚುವ ಹಂತದಲ್ಲಿದ್ದ ಹೆಬ್ಬಾಳು ಸಂಘವನ್ನು ಪ್ರಗತಿಯತ್ತ ಕೊಂಡ್ಯೂಯಲ್ಲು ಕಾರಣರಾದ ಇಲ್ಲಿನ ಸಿಇಒ ಡಿ.ಎಸ್.ಚಂದ್ರಶೇಖರ್‌ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದೇ ಸಂರ್ಧಭದಲ್ಲಿ ಸಂಘದ ವ್ಯಾಪ್ತಿಯ ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾದ ಸಾಲ ಸೌಲಭ್ಯದ ಚೆಕ್‌ಗಳನ್ನು ವಿತರಿಸಲಾಯಿತು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮಿತ್.ವಿ.ದೇವರಹಟ್ಟಿ, ಹೆಚ್.ಸುಬ್ಬಯ್ಯ, ಸಂಘದ ಅಧ್ಯಕ್ಷ ಹೆಚ್.ಆರ್.ಬಾಲಕೃಷ್ಣ(ಬಾಲು) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಸಿ.ಎಂ.ರಾಜೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರನಾಯಕ, ಎನ್.ಪಿ.ಪ್ರಸನ್ನ(ಅಪ್ಪಿ), ಹೆಚ್.ಹೆಚ್.ನಾಗೇಂದ್ರ ಹೆಚ್.ಕೆ.ಧನಂಜಯ, ಮಂಜುನಾಥ್, ಕೇಬಲ್‌ರವಿ, ಶಶಿಕಲಾ, ರೂಪ, ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಲಿಂಗರಾಜು, ಸಂಘದ ಸಿಇಒ ಡಿ.ಎಸ್.ಚಂದ್ರಶೇಖರ್, ಸಿಬ್ಬಂದಿಗಳಾದ ಉದಯಕುಮಾರ್, ಕುಬೇರ, ಪುನೀತ್‌ಕುಮಾರ್ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular