ಮೈಸೂರು: 05/11/2023 ರ ಭಾನುವಾರ ಸಂಜೆ 04:30 ಗಂಟೆಯಿಂದ 09:00 ಗಂಟೆಯ ವರೆಗೆ ಬಹಳ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಕನ್ನಡ ರಾಜ್ಯೋತ್ಸವದ ಅಂಗವಾಗಿ 50 ಸಸಿ ನೆಡುವ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ,ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ರಾಜ್ಯೋತ್ಸವವನ್ನು ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ರವರು ಉದ್ಘಾಟಿಸಿದರು.ವೈದ್ಯಕೀಯ ತಪಾಸಣೆಯನ್ನು ಆರೋಗ್ಯಾಧಿಕಾರಿ ಪರಮೇಶ್ವರ್ ಉದ್ಘಾಟಿಸಿದರು.
ಸಸ್ಯ ಶಾಸ್ತ್ರ ತಜ್ಞರಾದ ಪ್ರೊ ಪಿ.ಟಿ.ಮಹೇಶಪ್ಪ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉದ್ಯಾನವನದಲ್ಲಿ 50 ಸಸಿಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕೆ.ಆರ್.ಗಣೇಶ್ ವಹಿಸಿದ್ದರು, A N ರಾಮಕೃಷ್ಣ, ನಾಗಭೂಷಣ್ ಆಚಾರ್, ನಾಗರಾಜ್, ಪರಮೇಶ್ವರ್, ಶ್ರೀಧರ್ ಹಾಗೂ ಮಹೇಶಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪೃಥು ಪಿ ಅದ್ವೈತ್ ಪ್ರಾರ್ಥನೆ ಮಾಡಿದರು. ಬಡಾವಣೆಯ ಎಲ್ಲಾ ಮಕ್ಕಳು ಸೇರಿ ಕನ್ನಡದ ದೀಪವನ್ನು ಹಚ್ಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ್ ರವರು ಕನ್ನಡ ಎಂಬುದು ನಮ್ಮ ಮನಸ್ಸಿನ ಭಾಷೆ ಅದನ್ನು ಹೆಚ್ಚು ಬಳಸಬೇಕು, ಸರ್ಕಾರಿ ಕಚೇರಿಗಳಲ್ಲಿ ವ್ಯವಹರಿಸಲು ಬರುವವರು ಕನ್ನಡ ಬಂದರೂ ಸಹ ಕನ್ನಡ ಮಾತನಾಡದೆ ಬೇರೆ ಭಾಷೆಯಲ್ಲಿ ವ್ಯವಹರಿಸಿ ತಾವು ವಿದ್ಯಾವಂತರು ಎಂದು ತೋರಿಸಲು ಕಷ್ಟ ಪಡುತ್ತಾರೆ. ಮೈಸೂರು- ಬೆಂಗಳೂರು ಪ್ರದೇಶಗಳಲ್ಲಿ ವಾಸಮಾಡುವ ಶೇ 60 ರಷ್ಟು ಜನ ಬೇರೆ ಬೇರೆ ಜಿಲ್ಲೆಗಳಿಂದ ಬಂದವರು ಅವರೆಲ್ಲರೂ ಅವರ ಜಿಲ್ಲೆಯ ಮೂಲ ಗ್ರಾಮೀಣ ಭಾಷೆಯನ್ನು ಮರೆಯ ಬಾರದು, ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಆರ್.ಗಣೇಶ್ ಮಾತನಾಡಿ ಮೈಸೂರಿನ ಸಮೀಪದ ಚಾಮರಾಜನಗರದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ , ಚಾಮರಾಜನಗರವು ಜಾನಪದದ ತವರೂರು ದಯಮಾಡಿ ಎಲ್ಲರೂ ಚಾಮರಾಜನಗರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
50 ಸಸಿಗಳನ್ನು ಉದ್ಯಾನವನದಲ್ಲಿ ನೆಟ್ಟು ಮಾತನಾಡಿದ ಪಿ.ಟಿ. ಮಹೇಶಪ್ಪ ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಯಿತು ಅದರ ನೆನಪಿಗಾಗಿ ದಸರಾ ಇಂದ ಪ್ರಾರಂಭ ಮಾಡಿ ಇಂದಿನವರೆಗೂ 50 ಗಿಡಗಳನ್ನು ಉದ್ಯಾನವನದಲ್ಲಿ ನೆಟ್ಟು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ ಈ ಉದ್ಯಾನವನದಲ್ಲಿ ಎಲ್ಲರೂ ವಾಯುವಿಹಾರ, ವ್ಯಾಯಾಮಗಳನ್ನು ಮಾಡಿ ಬಳಸಿ ಕೊಳ್ಳಬೇಕು ಹಾಗೂ ಉದ್ಯಾನವನದಲ್ಲಿ ಗಿಡಗಳನ್ನು ಪೋಷಿಸಬೇಕು ಎಂದು ತಿಳಿಸಿದರು.
ಬಡಾವಣೆಯ ಗೃಹಿಣಿಯರು ರಚನಾ ಪಾರ್ಶ್ವನಾಥ್ ಹಾಗೂ ಪೂಜಾ ಪುನೀತ್ ರ ನೇತೃತ್ವದಲ್ಲಿ ಕೋಲಾಟ ಮಾಡಿದರು, ಕುಮಾರಿ ವರ್ಷ ರಮೇಶ್ ಭರತನಾಟ್ಯ ಮಾಡಿದರು.

ಅಂಕಿತ ಹಾಗೂ ಸಂಜನಾ ನೃತ್ಯ ಮಾಡಿದರು, ಕೃಷ್ಣ ಕೊಳಲು ವಾದನ ಮಾಡಿದರು, ಬಡಾವಣೆಯ ಚಿಣ್ಣರು ನೃತ್ಯ ಪ್ರದರ್ಶನ ಮಾಡಿದರು. ಪೃಥು ಪಿ ಅದ್ವೈತ್ ಹಾಗೂ ರಾಘವ ಕನ್ನಡ ಹಾಡುಗಳನ್ನು ಹಾಡಿದರು. ಹರಣ್ ರವರು ಯೋಗ ಪ್ರದರ್ಶನ ಮಾಡಿದರು. ಪುನೀತ್ ಜಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪಾರ್ಶ್ವನಾಥ ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ರಚನಾ ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಬಡಾವಣೆಯ ಎಲ್ಲಾ ನಿವಾಸಿಗಳು ಹಾಜರಿದ್ದರು.