ಕೆ.ಆರ್ ನಗರ: ಕಂದಾಯ ಇಲಾಖೆ ಮಾತೃ ಹೃದಯದ ಇಲಾಖೆ ಆಗಿದ್ದು, ಎಲ್ಲಾ ಇಲಾಖೆ ಕಾರ್ಯಕ್ರಮಗಳನ್ನು ಕಂದಾಯ ಇಲಾಖೆಯ ವತಿಯಿಂದಲೇ ಮೊದಲು ಪ್ರಾರಂಭ ಮಾಡಲಾಗುವುದು ಇಂತಹ ಇಲಾಖೆ ದಿನಾಚರಣೆಯನ್ನು ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಕಂದಾಯ ಇಲಾಖೆಗೆ ಒಂದು ಗರಿ ಇದ್ದಂತೆ ಎಂದು ತಹಸಿಲ್ದಾರ್ ಸಿ ಎಸ್ . ಪೂರ್ಣಿಮಾ ತಿಳಿಸಿದರು.
ಪಟ್ಟಣದ ಕುವೆಂಪು ಬಡಾವಣೆಯ ಸಾಯಿ ಕನ್ವೆನ್ಷನ್ ಕಲ್ಯಾಣ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕಂದಾಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಇಲಾಖೆಗಳಿಗಿಂತಲೂ ಕಂದಾಯ ಇಲಾಖೆ ಅಂತ್ಯ ಸರ್ವ ಶ್ರೇಷ್ಠ ಇಲಾಖೆಯಾಗಿದ್ದು ದಕ್ಷತೆಗೆ ಪ್ರಾಮಾಣಿಕತೆಗೆ ಹೆಸರಾಗಿರುವ ಈ ಇಲಾಖೆ 365 ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವ ಇಲಾಖೆಯ ನೌಕರರಿಗೆ ಒಂದು ದಿನದ ಹಬ್ಬವಾಗಿ ಆಚರಿಸುತ್ತಿರುವ ಕಂದಾಯ ಇಲಾಖೆಯ ಎಲ್ಲಾ ನೌಕರರು ಮತ್ತು ಕುಟುಂಬಸ್ಥರು ಸಂತೋಷದಿಂದ ತನಗೆ ವೃತ್ತಿಯನ್ನು ನೀಡಿದ ಕಂದಾಯ ಇಲಾಖೆಯ ದಿನಾಚರಣೆ ತನಗೆ ಜನ್ಮ ನೀಡಿದ ಕನ್ನಡಾಂಬೆಯ ದಿನಾಚರಣೆಯನ್ನು ಆಚರಿಸುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಕನ್ನಡದ ನೆಲ ಜಲ ಗಡಿಗಾಗಿ ತಮ್ಮ ಹೋರಾಟವನ್ನು ಮುಡುಪಾಗಿಟ್ಟ ಹಿರಿಯರ ಮಾರ್ಗದರ್ಶನದಲ್ಲಿ ನಾವು ನೀವುಗಳೆಲ್ಲರೂ ಪ್ರಾಮಾಣಿಕವಾಗಿ ಕನ್ನಡ ನಾಡನ್ನು ಕಟ್ಟೋಣ ಕನ್ನಡವನ್ನು ಬೆಳೆಸೋಣ ಕನ್ನಡ ಶ್ರೀಮಂತಿಕೆಯನ್ನು ಮೆರೆಸೋಣ ಕಂದಾಯ ಇಲಾಖೆಯನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಇಲಾಖೆ ಎಂಬ ಹೆಗ್ಗಳಿಕೆಗಾಗಿ ನಾವು ನೀವೆಲ್ಲರೂ ದುಡಿಯೋಣ ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಇಓ ಹರೀಶ್ ಮಾತನಾಡಿ, ಬೇರೆ ಇಲಾಖೆಗಳಿಗಿಂತ ಕಂದಾಯ ಇಲಾಖೆ ಭಿನ್ನವಾಗಿದ್ದು ಶಿಸ್ತಿಗೆ ಮತ್ತೊಂದು ಹೆಸರೇ ಕಂದಾಯ ಇಲಾಖೆಯಾಗಿದ್ದು ಎಲ್ಲಾ ಇಲಾಖೆಗಳ ಜವಾಬ್ದಾರಿಯನ್ನು ಕಂದಾಯ ಇಲಾಖೆಯೇ ಹೊರುತ್ತದೆ ಎಂದು ತಿಳಿಸಿದ ಅವರು ಕನ್ನಡದ ಬಗ್ಗೆ ಕನ್ನಡದಲ್ಲಿ ಮಾತನಾಡುವ ವ್ಯವರಿಸುವ ಇಲಾಖೆ ಕಂದಾಯ ಇಲಾಖೆಯಾಗಿದ್ದು ಕಂದಾಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಎರಡು ಸಹ ಈ ರಾಜ್ಯದ ಎರಡು ಕಣ್ಣುಗಳಿದ್ದಂತೆ ಎಂದು ವರ್ಣಿಸಿದರು. ಕನ್ನಡಿಗರಾದ ನಮಗೆ ಕನ್ನಡ ರಾಜ್ಯೋತ್ಸವ ನವೆಂಬರ್ ಒಂದರಂದು ಕನ್ನಡ ಹಬ್ಬವಾಗಿರಬಾರದು ಅದೇ ರೀತಿ ಕಂದಾಯ ದಿನಾಚರಣೆಯು ಒಂದು ದಿನದ ಆಚರಣೆ ಯಾಗಿರದೆ ವರ್ಷದ ಪ್ರತಿದಿನ ಪ್ರತಿ ಗಳಿಗೆ ಗಂಟೆಯೂ ಸಹ ಕನ್ನಡ ರಾಜ್ಯೋತ್ಸವ ಕಂದಾಯ ದಿನಾಚರಣೆ ಎನ್ನುವಂತಿರಬೇಕು ಆಗ ಮಾತ್ರ ಕಂದಾಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಗ್ರೇಡ್ -2 ತಹಸಿಲ್ದಾರರುಗಳಾದ ಸಾಲಿಗ್ರಾಮದ ಮೋಹನ್ ಕುಮಾರ್, ಕೆ ಆರ್ ನಗರದ ಬಾಲಸುಬ್ರಮಣ್ಯ ಶಿರಸ್ತೇದಾ ರುಗಳಾದ ಮೇಲೂರು ಶಿವಕುಮಾರ್, ಅಸ್ಲಾಂ ಪಾಸ ಮಾತನಾಡಿದರು.
ವೇದಿಕೆಯಲ್ಲಿ ಉಪ ತಹಸಿಲ್ದಾರ್ ಗಳಾದ ಮಹೇಶ್, ಮಂಜುನಾಥ್, ದೀಪಕ್, ಕೃಷ್ಣಮೂರ್ತಿ,ಕೆ.ಜ ಶರತ್ ಕುಮಾರ್, ಧ್ರುವ ಕುಮಾರ್, ಸಣ್ಣ ಸ್ವಾಮಿ, ಶಶಿಕುಮಾರ್, ಭಾಸ್ಕರ್, ಚಿದಾನಂದ ,ಸಂತೋಷ್,ಶಿವಲಿಂಗೇಗೌಡ,ವರುಣ್, ಯಶವಂತ್, ಮಧು, ರಂಜಿನಿ ದೀಪಾಶ್ರೀ, ಐಶ್ವರ್ಯ,ದೀಪ,ಶೀಲಾ, ಹಂಸ,ಜ್ಯೋತಿಪಾಟೀಲ್,ರಮ್ಯ,ಪ್ರಿಯಾ, ಸೇರಿದಂತೆ ಇನ್ನಿತರರು ಹಾಜರಿದ್ದರು.