Saturday, April 19, 2025
Google search engine

HomeUncategorizedಪತ್ರಕರ್ತರಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸಿ: ಸಮಾಜ ಸೇವಕ ಚೌತಿ ಮಲ್ಲಣ್ಣ

ಪತ್ರಕರ್ತರಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸಿ: ಸಮಾಜ ಸೇವಕ ಚೌತಿ ಮಲ್ಲಣ್ಣ

ಪಿರಿಯಾಪಟ್ಟಣ: ಸರ್ಕಾರ ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವಂತೆ ಗ್ರಾಮಾಂತ್ರ ಪ್ರದೇಶದ ಪತ್ರಕರ್ತರಿಗೂ ಉಚಿತ ಬಸ್ ಸೌಲಭ್ಯ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಚೌತಿ ಮಲ್ಲಣ್ಣ ಸರ್ಕಾರವನ್ನು ಒತ್ತಾಸಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ಹಗಲೂ ರಾತ್ರಿ ದುಡಿಯುವ ಗ್ರಾಮಾಂತರ ಪತ್ರಕರ್ತರ ಬದುಕು ದುಸ್ತರವಾಗಿದೆ, ಪತ್ರಕರ್ತರು ಸರ್ಕಾರದ ಸಾಧನೆಗಳು, ಲೋಪ ದೋಷಗಳನ್ನೂ ಸುದ್ದಿ ರೂಪದಲ್ಲಿ ಸಾರ್ವಜನಿಕ ಓದುಗರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಸಮಾಜ ತಿದ್ದುವ ಕೆಲಸದ ಜೊತೆಗೆ ಸರ್ಕಾರ , ಅಧಿಕಾರಿಗಳು ಜನಪ್ರತಿನಿಧಿಗಳ ಕಾರ್ಯವೈಕರಿ, ಸರ್ಕಾರದ ಸಮಾರಂಭ ಹಾಗೂ ಮಹತ್ವದ ಯೋಜನೆಗಳ ಸುದ್ದಿ ಬಿತ್ತರಿಸುವುದರೊಂದಿಗೆ ಜೊತೆ ಜೊತೆಯಲ್ಲಿ ಸಾರ್ವಜನಿಕರ, ವಿರೋಧ ಪಕ್ಷಗಳ, ಸಂಘ ಸಂಸ್ಥೆಗಳ ಪ್ರತಿಭಟನೆ, ಮನವಿಗಳ ಬಗ್ಗೆ ಸವಿಸ್ತಾರವಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸರ್ಕಾರದ ಗಮನ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದ್ದರೂ, ಪತ್ರಕರ್ತರು ಸರ್ಕಾರದ ಸೂಕ್ತ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಚಳಿ, ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಓದುಗರ ಮನೆಗಳಿಗೆ, ಇಲಾಖೆಗಳಿಗೆ ಪತ್ರಿಕೆಗಳನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಸಮಾಜದ ಸ್ವಾಸ್ಥ ನಿರ್ಮಾಣಕ್ಕಾಗಿ ಜೀವದ ಹಂಗು ತೊರೆದು ಕೆಲಸ ಮಾಡುವ ಅದೆಷ್ಡೋ ಪತ್ರಕರ್ತರು ವೇತನವಿಲ್ಲದೆ ಸೇವೆ ಮಾಡುತ್ತಿದ್ದು ಇಂಥವರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಅನೇಕ ಪತ್ರಕರ್ತರು ಪತ್ರಿಕೋದ್ಯಮವನ್ನೇ ನಂಬಿ ತಮ್ಮ ಕುಟುಂಬ ನಿರ್ವಹಣೆಗೂ ಪರಿತಪಿಸುವಂತಾಗಿದೆ. ಆದ್ದರಿಂದ ತಾಲೂಕು, ಹೋಬಳಿಯಲ್ಲಿ ದುಡಿಯುವ ಪತ್ರಕರ್ತರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಉಚಿತ ನಿವೇಶನ, ಬಸ್ ಸೌಲಭ್ಯ, ಮಾಶಾಸನ, ಆರೋಗ್ಯ ವಿಮೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಹೊಸ ಸರ್ಕಾರ ಪತ್ರಕರ್ತರ ಕುಟುಂಬಕ್ಕೆ ಸೌಲಭ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಪತ್ರಿಕೆಯ ಉಳಿವಿಗಾಗಿ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

– 

RELATED ARTICLES
- Advertisment -
Google search engine

Most Popular