ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಬಂದರ್ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂದರ್ ಪೊಲೀಸರು ಬೈಕ್ ಸಮೇತ ಬಂಧಿಸಿದ್ದಾರೆ. ಬಂಧಿತನನ್ನು ಅಬ್ದುಲ್ ಖಾದರ್ ಫಹಾದ್ ಯಾನೆ ಫಹಾದ್ (25) ಎಂದು ಗುರುತಿಸಲಾಗಿದೆ. ಅ.20ರಂದು ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಮತ್ತು ಅ.31ರಂದು ನಗರದ ಜ್ಯೋತಿ ಸಮೀಪದ ಕೆಎಂಸಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕಳವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ನ.6ರಂದು ಆರೋಪಿಯನ್ನು ನಗರದ ಕುದ್ರೋಳಿ ಸಮೀಪದ ಕಂಡತ್‌ಪಳ್ಳಿ ಎಂಬಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಈ ಹಿಂದೆ ಬಂದರ್ ಠಾಣೆಯಲ್ಲಿ 3, ಬರ್ಕೆ ಮತ್ತು ಕದ್ರಿ ಠಾಣಾ ವ್ಯಾಪ್ತಿಯಲ್ಲಿ ತಲಾ 2 ಪ್ರಕರಣ ದಾಖಲಾಗಿವೆ.
