Monday, April 21, 2025
Google search engine

Homeಸ್ಥಳೀಯಅರಿವಿನ ಕಣ್ಣು ತೆರೆದರೆ ಬದುಕಿಗೊಂದು ಮೌಲ್ಯ: ಡಾ.ಎಸ್.ಪಿ.ಉಮಾದೇವಿ

ಅರಿವಿನ ಕಣ್ಣು ತೆರೆದರೆ ಬದುಕಿಗೊಂದು ಮೌಲ್ಯ: ಡಾ.ಎಸ್.ಪಿ.ಉಮಾದೇವಿ

ಮೈಸೂರು: ೨ನೇ ಹಂತದ ಜೆಎಸ್‌ಎಸ್ ಬಡಾವಣೆಯಲ್ಲಿ ನಡೆದ ೩೦೬ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಅರಿವಿನ ಕಲ್ಪನೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಪಿ. ಉಮಾದೇವಿ ಮಾತನಾಡಿದರು.

ಯಾರು ಅರಿವಿನ ಕಣ್ಣನ್ನುತೆರೆಯುತ್ತಾರೊ, ಅವರಲ್ಲಿ ಜ್ಞಾನಕಿರಣಗಳು ಹೊರಹೊಮ್ಮುತ್ತವೆ. ಶರಣರು ನುಡಿದಂತೆ ನಡೆದವರು.ಅವರ ನಿಲುವುಗಳು ವೈಚಾರಿಕತೆಯನ್ನು ಸದೃಢಗೊಳಿಸಿದವು.ಅವರು ಸಾರ್ವಕಾಲಿಕವಾದ ಸತ್ಯಗಳನ್ನು ಬಿತ್ತಿದರು.ಬದುಕಿನಸಾರ್ಥಕತೆಗೆಕಾಯಕ, ದಾಸೋಹಗಳನ್ನು ಆಚರಿಸಬೇಕುಎಂದುತಿಳಿಸಿಕೊಟ್ಟವರು ಶರಣರು.ಸಂತೃಪ್ತಿಗೆ ಸಮಾನವಾದ ಸಂಪತ್ತಿಲ್ಲ. ಸಹನೆಗೆ ಸಮಾನವಾದ ಸದ್ಗುಣವಿಲ್ಲ. ತನ್ನನ್ನುತಾನುಅರಿತವನೇ ನಿಜವಾದ ಮನುಷ್ಯ.ಜೀವನದಎಲ್ಲ ಕ್ಷೇತ್ರಗಳ ಸಮರ್ಥಅನ್ವೇಷಣೆಯೇ ಸಂಸ್ಕೃತಿ.ಸರ್ವಧರ್ಮಸಮನ್ವಯ ಸಾಧಿಸುವುದೇ ಭಾರತೀಯ ಸಂಸ್ಕೃತಿ.ನಾಗರಿಕತೆಯನ್ನು ಉಳಿಸಿಕೊಂಡು ಮತ್ತುಆಧುನಿಕತೆಯನ್ನು ಅಳವಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ.ಪರಂಪರೆಯಅರಿವಿದ್ದಾಗ ಮಾತ್ರ ವಾಸ್ತವದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆಅವರು ನುಡಿದರು.

ಬಿ.ಮಂಜುಳ ಮತ್ತು ಟಿ.ಎನ್. ಗಿರೀಶ್‌ರವರುಕಾರ್ಯಕ್ರಮದಸೇವಾರ್ಥ ಸಲ್ಲಿಸಿದರು. ಎನ್. ರಾಜಶೇಖರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಪ್ರಾರ್ಥನೆ ಸಲ್ಲಿಸಿದರು. ಬಿ. ಮಂಜುಳ ಸ್ವಾಗತಿಸಿದರು. ಗುರುಬಸಪ್ಪ ವಂದಿಸಿದರು. ಡಿ.ಎಂ.ಸಿದ್ಧಲಿಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ೨ನೇ ಹಂತದ ಜೆಎಸ್‌ಎಸ್ ಬಡಾವಣೆಯಲ್ಲಿ ನಡೆದ ೩೦೬ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದಡಾ.ಎಸ್.ಪಿ.ಉಮಾದೇವಿಯವರು ಶರಣರ ವಚನಗಳಲ್ಲಿ ಅರಿವಿನ ಕಲ್ಪನೆ ಕುರಿತು ಉಪನ್ಯಾಸ ನೀಡಿದರು. ಎನ್. ರಾಜಶೇಖರ್ ಇದ್ದರು.

RELATED ARTICLES
- Advertisment -
Google search engine

Most Popular