ಛತ್ತೀಸಗಢ: ೨೦ ಕ್ಷೇತ್ರಗಳ ಮೊದಲ ಹಂತ ಮತ್ತು ಮಿಜೋರಾಂ ರಾಜ್ಯದ ಎಲ್ಲ ೪೦ ಸ್ಥಾನಗಳ ವಿಧಾನಸಭೆಗೆ ಮತದಾನ ನಡೆಯಿತು. ಮಿಜೋರಾಂನಲ್ಲಿ ಶೇ. ೭೭.೭೩ ಮತದಾನವಾದರೆ, ಛತ್ತೀಸಗಢದಲ್ಲಿ ಶೇ .೭೨ ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಛತ್ತೀಸಗಢದಲ್ಲಿ ಮತದಾನಕ್ಕೆ ೫,೦೪ ಮತಗಾಗಳನ್ನು ಸ್ಥಾಪಿಸಲಾಗಿತ್ತು, ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಚುನಾವಣೆ ಶಾಂತಿಯುತವಾಗಿ ನಡೆಯಿತು, ನಕ್ಸಲ್ ಪ್ರದೇಶಗಳಲ್ಲಿ ಮತದಾನ ನಡೆದಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಿಜೋರಾಂನಲ್ಲಿ ಮತದಾನಕ್ಕೆ ೧,೨೭೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಲ್ಲಿ ಸಣ್ಣ ಮಟ್ಟದ ಗಲಾಟೆಗಳು ಆಗಿದ್ದು ಬಿಟ್ಟರೆ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಆಡಳಿತಾರೂಢ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ವಿರೋಧ ಪಕ್ಷ ಝೆಡ್ಪಿಎಂ ೪೦ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ಮತ್ತು ಎಎಪಿ ಕ್ರಮವಾಗಿ ೨೩ ಮತ್ತು ೪ ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.