ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿಗೆ ಅವಶ್ಯಕತೆ ಇರುವ ಕಚೇರಿಗಳನ್ನುಮತ್ತು 100 ಹಾಸಿಗೆ ಯುಳ್ಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು
ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಸ್ಕೌಟ್ಸ್ ಮತ್ತು ಗೈಡ್ಸ್, ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸಾಂಸ್ಕೃತಿಕ ಭವನ, ಕ್ರೀಡಾಂಗಣ ಸೇರಿದಂತೆ ಇನ್ನು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲು ಮುಂದಿನ ಬಜೆಟ್ ನಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ತಾಲೂಕಿಗೆ ಅವಶ್ಯಕತೆ ಇರುವ ಅಭಿವೃದ್ಧಿ ಕೆಲಸಗಳನ್ನು ಹಂತ ಹಂತ ವಾಗಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ ಅವರು ವಿದ್ಯಾರ್ಥಿಗಳ ಭವಿಷ್ಯ ಬಹಳ ಮುಖ್ಯವಾಗಿದೆ, ಮನಸಿಟ್ಟು ಓದಿ ಕೊಂಡು ನಿರ್ದಿಷ್ಟ ಗುರಿಯನ್ನು ಮುಟ್ಟುವ ಪ್ರಯತ್ನ ಮಾಡಬೇಕು. ಸಾರ್ಥಕ ಬದುಕು ಕಾಣಲು ಉನ್ನತ ಮಟ್ಟದ ಅಧಿಕಾರಿಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಶಂಕರ ದೇವನೂರು, ಪ್ರಾಂಶುಪಾಲರಾದ ಹಂಸವೇಣಿ,ತಾ ಪಂ ಮಾಜಿ ಅಧ್ಯಕ್ಷ ರಾದ ಹಾಡ್ಯ ಮಹದೇವಸ್ವಾಮಿ,ಹರದನಹಳ್ಳಿ ಮಂಜು, ಚಂದ್ರು, ಎಸ್ ಸಿ ಬ್ಲಾಕ್ ಅಧ್ಯಕ್ಷ ಕಂಠಿ ಕುಮಾರ್, ನಗರ ಅಧ್ಯಕ್ಷ ರಮೇಶ್, ಉದಯ್ ಶಂಕರ್, ಪಿ ಡಿ ಒ ಮಂಜುನಾಥ್, ಉಪನ್ಯಾಸಕರುಗಳಾದ ರಾಜೇಶ್, ರಘು, ಶೇಖರ್, ಮಂಜುನಾಥ್, ಸುವರ್ಣ, ಸುರೇಶ, ಮುಖಂಡರಾದ ಸೌಕತ್, ವಾಸಿಮ್, ನಟರಾಜ್, ಮಂಜುನಾಥ್, ಹೇಮಂತ್, ಶ್ರೀನಿವಾಸ್ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿ ನಿಯರು ಇನ್ನಿತರರು ಇದ್ದರು.