ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ನಾನಲ್ಲ. ಸಾಯುವವರೆಗೂ ಹೆಣದ ಮೇಲೆ ಫ್ಲಾಗ್ ಹಾಕುವವರಗೆ ರಾಜಕಾರಣದಲ್ಲಿರಬೇಕು ಅನ್ನುವವರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಹೇಳಿದರು.
ಮಂಡ್ಯದ ದೊಡ್ಡಬ್ಯಾಡರಹಳ್ಳಿಯಲ್ಲಿ ಪಕ್ಷದ ಸೂಚನೆ ಮೇರೆಗೆ ಡಿವಿಎಸ್ ನಿವೃತ್ತಿ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ನನಗೆ ಕೊಟ್ಟಿಲ್ಲ. ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರು. ನನಗೆ ಕೇಂದ್ರದ ಯಾವುದೇ ನಾಯಕರ ಒತ್ತಡ ಇಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒತ್ತಡದ ರಾಜಕಾರಣ ಮಾಡಿದವನಲ್ಲ. ಯಾರೇ ದೊಡ್ಡವರಿದ್ದರು ನ್ಯಾಷನಲ್ ಪ್ರೆಸಿಡೆಂಟ್ ಇರಲಿ ಒತ್ತಡ ಇಲ್ಲ ಎಂದರು.
ನನ್ನ ಸ್ವಇಚ್ಛೆಯಿಂದ ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ. ಮುಖ್ಯಮಂತ್ರಿ ಪದವಿಯಿಂದ ಇಳಿಯಬೇಕಿದ್ದರೆ ತಕ್ಷಣವೇ ಇಳಿದೆ. ನಮ್ಮ ಪಕ್ಷದ ಆದೇಶವನ್ನು ಪಾಲನೆ ಮಾಡಿದವ ನಾನು. ಕೇಂದ್ರದಲ್ಲಿ ಮಂತ್ರಿಗಳ ಬದಲಾವಣೆ ಮಾಡಲು ಕರೆಸಿದ್ರು ನಾವು ರಾಜೀನಾಮೆ ಕೊಟ್ಟಿದ್ದೇವೆ. ಇವತ್ತು ಅವರು ಯಾರು ಹೇಳಿಲ್ಲ, ಕೇಳಿಲ್ಲ. 25 ವರ್ಷ ರಾಜಕಾರಣಿಯಾಗಿದ್ದಾಗಲೇ ನಿವೃತ್ತನಾಗಬೇಕು ಅನ್ಕೊಂಡಿದ್ದೆ ಎಂದು ತಿಳಿಸಿದರು.
ಒಬ್ಬ ಸಾಯುವವರೆಗೂ ಅವನ ಹೆಣದ ಮೇಲೆ ಫ್ಲಾಗ್ ಹಾಕುವವರಗೆ ಅವನು ಇರಬೇಕು ಅನ್ನುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆ ರೀತಿಯ ಸ್ವಾರ್ಥ ರಾಜಕಾರಣಿ ನಾನಲ್ಲ. ರಾಜಕೀಯದಿಂದ ನಿವೃತ್ತಿಯಾಗಲ್ಲ, ಚುನಾವಣಾ ರಾಜಕೀಯದಿಂದ ನಿವೃತ್ತಿಯಗಿದ್ದೇನೆ. ನನಗೆ ಎಲ್ಲವನ್ನೂ ಕೊಟ್ಟ ನಮ್ಮ ಪಕ್ಷಕ್ಕೆ ನಾನು ನಿರಂತರವಾಗಿ ದುಡಿಯುತ್ತೇನೆ ಎಂದರು.