Tuesday, April 22, 2025
Google search engine

Homeರಾಜ್ಯಅಯೋಧ್ಯಾ : ೨೪ ಲಕ್ಷ ದೀಪಗಳಿಂದ ಗಿನ್ನೆಸ್ ದಾಖಲೆಗೆ ಸಜ್ಜು

ಅಯೋಧ್ಯಾ : ೨೪ ಲಕ್ಷ ದೀಪಗಳಿಂದ ಗಿನ್ನೆಸ್ ದಾಖಲೆಗೆ ಸಜ್ಜು


ಅಯೋಧ್ಯಾ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ೨೦೨೪ರ ಜನವರಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮುಂದಿನ ವರ್ಷ ಜನವರಿ ೨೨ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್.ಎಸ್.ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಇದಕ್ಕೂ ಮುನ್ನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಜ್ಜಾಗಿದೆ. ದೀಪಾವಳಿ ಹಿನ್ನೆಲೆ ಅಯೋಧ್ಯೆಯಲ್ಲಿನ ೫೧ ಘಾಟ್‌ಗಳಲ್ಲಿ ೨೪ ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಲು ಸಿದ್ಧತೆ ನಡೆಸಲಾಗಿದೆ. ದೀಪೋತ್ಸವ ಸಂಬಂಧ ರಾಮ ಜನ್ಮಭೂಮಿ ಪಥವನ್ನು ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ಇಲ್ಲಿನ ಬೀದಿಗಳು ರಂಗೋಲಿಗಳಿಂದ ಕಂಗೊಳಿಸುತ್ತಿವೆ. ಸುಮಾರು ೨೪ ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳಿಂದ ದೀಪೋತ್ಸವ ಆಚರಿಸಲಾಗುತ್ತಿದ್ದು, ಈ ಮೂಲಕ ಗಿನ್ನೆಸ್ ದಾಖಲೆ ಬರೆಯಲು ಮುಂದಾಗಿದೆ. ದೀಪೋತ್ಸವದ ಶೋಭಾಯಾತ್ರೆ ಆರಂಭಗೊಂಡಿದ್ದು, ಈ ವೇಳೆ ಮಹಿಳೆಯರು ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.

ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇಲ್ಲಿನ ದೀಪೋತ್ಸವದಲ್ಲಿ ಭಾಗಿಯಾಗಿ ಧನ್ಯರಾಗುತ್ತಾರೆ. ಜಾರ್ಖಂಡ್‌ನ ಪಕೂರ್ ಜಿಲ್ಲೆಯ ಬುಡಕಟ್ಟು ಜನಾಂಗದವರು ಅದ್ಧೂರಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ೪೮ ಮಂದಿ ಬುಡಕಟ್ಟು ಜನಾಂಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಇಂದು ಶನಿವಾರ ಅಯೋಧ್ಯೆಗೆ ಬಂದಿಳಿದಿದ್ದಾರೆ.

RELATED ARTICLES
- Advertisment -
Google search engine

Most Popular