Sunday, April 20, 2025
Google search engine

Homeರಾಜ್ಯಕಬ್ಬಿನ ಹಣ ನೀಡದೆ ಸತಾಯಿಸುತ್ತಿರುವ ನಿರಾಣಿ ಶುಗರ್ಸ್: ಬೃಹತ್ ಪ್ರತಿಭಟನೆ ಎಚ್ಚರಿಕೆ

ಕಬ್ಬಿನ ಹಣ ನೀಡದೆ ಸತಾಯಿಸುತ್ತಿರುವ ನಿರಾಣಿ ಶುಗರ್ಸ್: ಬೃಹತ್ ಪ್ರತಿಭಟನೆ ಎಚ್ಚರಿಕೆ

ಕೆ ಆರ್ ನಗರ: ನಿರಾಣಿ ಶುಗರ್ಸ್ ವತಿಯಿಂದ 16.667 ಟನ್ ಕಬ್ಬಿನ ಹಣವನ್ನು ನೀಡದೆ ಸತಾಯಿಸುತ್ತಿದ್ದು, ಅಧಿಕಾರಿ ವರ್ಗವನ್ನು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದಮ್ಕಿ ಹಾಕಿ ಹೆದರಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ನನ್ನ ಹಣ ಕೊಡಿಸಿ ಎಂದು ರೈತ ಮುಖಂಡ ಕುಪ್ಪೆ. ಎಸ್. ಚಂದನ್ ಕುಮಾರ್ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವೀಂದ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

 ಪಟ್ಟಣದ ಪತ್ರಕರ್ತರ ಭವನದಲ್ಲಿ ಚಂದನ್ ಕುಮಾರ್ ಮತ್ತು ರವೀಂದ್ರ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರೈತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಇಲ್ಲದಿದ್ದರೆ ಕಾರ್ಖಾನೆಯ ಮುಂಭಾಗ ಮತ್ತು  ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂಭಾಗ ರೈತರೊಡಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಿರಾಣಿ ಶುಗರ್ಸ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

ಚುಂಚನಕಟ್ಟೆ ನಿರಾಣಿ ಶುಗರ್ಸ್ ಫ್ಯಾಕ್ಟರಿ ಅವರು ಕ್ಷೇತ್ರ ಸಹಾಯಕ ಮಿಥುನ್ ನನ್ನ ಕಬ್ಬನ್ನು ಬೇರೆಯವರ ಪ್ರೇಮ ಎಂಬ  ಹೆಸರಿಗೆ 16.6 ಟನ್ ಕಬ್ಬನ್ನು ಬಿಡಿಸಿಕೊಂಡಿರುತ್ತಾರೆ ನನ್ನ ಅರಿವಿಗೆ ಬಾರದೆ ನನ್ನ ಕಬ್ಬನ್ನು ಬೇರೆಯವರ ಹೆಸರಿಗೆ ಬಿಟ್ಟಿರುವುದೇ ಅಪರಾಧವಾಗಿದ್ದು, ಆದರೂ ನನ್ನ ಹಣವನ್ನು ನನಗೆ ಕೊಡುವಂತೆ ಹೇಳಿದಾಗ ನನ್ನನ್ನು ಹೆದರಿಸಿ ಬೆದರಿಸುವ ಜೊತೆಗೆ ದೂರವಾಣಿಯಲ್ಲಿ ನಿಂದಿಸಿರುವ ಬಗ್ಗೆ ನನ್ನಲ್ಲಿ ದಾಖಲೆ ಇದೆ. ಆದ್ದರಿಂದ ನನ್ನ ಹಣವನ್ನು ನನಗೆ ಕೊಡಿಸುವ ಜೊತೆಗೆ ಬೇರೆ ಇನ್ನಾರಿಗೂ ಇಂತಹ ತೊಂದರೆಯನ್ನು ನೀಡಿದಂತೆ ಎಚ್ಚರಿಸುವ ಜೊತೆಗೆ ಕ್ರಮ ಕೈಗೊಳ್ಳುವಂತೆ ಶುಗರ್ಸ್ ಕಂಪನಿ ಮತ್ತು ತಾಲೂಕ್ ಆಡಳಿತಕ್ಕೆ ಒತ್ತಾಯಿಸಿದರು.

ಈ ಬಗ್ಗೆ ನಿರಾಣಿ ಶುಗರ್ಸ್ ಮಾಲೀಕರು ಸೇರಿದಂತೆ ಎ ಜಿ ಎಂ ರಾಘವೇಂದ್ರ ಜಿ ಎಂ ರವಿಯವರಿಗೂ ತಿಳಿಸಿದರು ಏನು ಪ್ರಯೋಜನವಾಗಿಲ್ಲ( ದಿನಾಂಕ 06.10.2023ರ  01L012962 pass no 01P000153. VEH NO KA21 3863) ಈ ದಾಖಲೆಗಳನ್ನು ನಿರಾಣಿ ರವರಿಗೆ ಈ ಮೇಲ್ ಮತ್ತು ವಾಟ್ಸಾಪ್ ಮಾಡಲಾಗಿದೆ. ಈ ಬಗ್ಗೆ ಕೆಲವು ಅಧಿಕಾರಿಗಳನ್ನು ಕೇಳಿದಾಗ ಇಂಥ ವ್ಯವಸ್ಥೆಗಳು ಬೇಕಾದಷ್ಟು ಆಗಿವೆ ಏನು ಮಾಡಲಾಗುವುದಿಲ್ಲ ಎಂಬ ಸಬುದ್ಧರವನ್ನು ಜಿಎಮ್ ಮತ್ತು ಎ ಜಿ ಎಮ್ ಹೇಳುತ್ತಾರೆ ಹೀಗಾದರೆ ರೈತರ ಕಥೆ ಏನು ರೈತರಿಗೆ ರಕ್ಷಣೆ ಕೊಡುವವರು ಯಾರು ಎಂಬ ಅಳಲನ್ನು ತೋಡಿಕೊಂಡರು.

ಚುಂಚನಕಟ್ಟೆಯ ಕಾರ್ಖಾನೆ ಪ್ರಾರಂಭವಾಗದಿದ್ದರೂ, ಈ ಭಾಗದ ಕಬ್ಬನ್ನು ನಿರಾಣಿ ಶುಗರ್ಸ್ ಮಾರ್ಗದರ್ಶನದಂತೆ ಕಬ್ಬನ್ನು ಕೊಪ್ಪ, ಮದ್ದೂರಿಗೆ ಸಾಗಿಸುತ್ತಿದ್ದು ನಮ್ಮ ಕಬ್ಬು ಕಮ್ಮಿ ಇದ್ದರೆ ನಮ್ಮ ಅನುಮತಿ ಇಲ್ಲದೆ ಬೇರೆ ಬೇರೆ ಕಬ್ಬನ್ನು ಒಂದೇ ವಾಹನದಲ್ಲಿ ತುಂಬಿಸಿಕೊಂಡು ತೂಕದಲ್ಲಿಯೂ ಸಹ ಮೋಸ ಮಾಡುತ್ತಿದ್ದು ಪದವೀಧರ ರೈತನಾದ ನನಗೆ ಮೋಸ ಮಾಡಿರುವ ಈ ಕಂಪನಿ ಮತ್ತು ಕಂಪನಿಯ ನೌಕರರು ಅವಿದ್ಯಾವಂತರ ರೈತರನ್ನು ಬಿಡುವರೇ ಎಂಬ ಪ್ರಶ್ನೆಯಾಗಿದೆ, ಆದ್ದರಿಂದ ಈ ಕೂಡಲೇ ನನ್ನ ಹಣವನ್ನು ನನಗೆ ಕೊಡುವ ಜೊತೆಗೆ ಈ ಭಾಗದಲ್ಲಿ ಅನ್ಯಾಯವೆಸಗುತ್ತಿರುವ ಅಧಿಕಾರಿಗಳನ್ನು ತೆಗೆಯುವ ಜೊತೆಗೆ ಅನುಭವಿ ಪ್ರಾಮಾಣಿಕ ನೌಕರರನ್ನು ನೇಮಿಸುವಂತೆ ಒತ್ತಾಯಿಸಿದರು.        

ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಅಂಥವರನ್ನು ದೂರವಾಣಿಯ ಮೂಲಕ ಹೆದರಿಸುವ ಕೆಲಸವನ್ನು ಮಾಡುತ್ತಾರೆ. ರೈತ ಜೀವನ ಸಾಗಿಸಲು ಕಷ್ಟವಿರುವ  ಸ್ಥಿತಿ ಇರುವಾಗ ನಾನು ಬೆಳೆದ ಬೆಳೆಯನ್ನು ಸಾಗಿಸಲು  ಸಾಗಿಸಿದ ನಂತರ ಹಣ ಪಡೆಯಲು ಇಷ್ಟೊಂದು ಕಷ್ಟ ಪಡಬೇಕು. ಆದ್ದರಿಂದ ಈ ಕೂಡಲೇ ಮುರುಗೇಶ್ ನಿರಾಣಿ ಅವರು ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳು ರೈತರನ್ನು ಕ್ಷಮೆ ಕೇಳುವ ಮೂಲಕ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular