ಕೆ.ಆರ್.ನಗರ: ಪಟ್ಟಣದ ಕನಕನಗರ ಬಡಾವಣೆಯ ಶ್ರೀ ವಿನಾಯಕ ಯುವಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿoದ ಆಚರಿಸಲಾಯಿತು. ಸಂಘದ ವತಿಯಿಂದ ಎರಡು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರ ಜತೆಗೆ ಬಡಾವಣೆಯ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ ಕರ್ನಾಟಕ ಏಕೀಕರಣಗೊಂಡು ೫೦ ವರ್ಷ ಆದ ಹಿನ್ನಲೆಯಲ್ಲಿ ಸರ್ಕಾರ ವರ್ಷವಿಡಿ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದೆ ಇದನ್ನು ಅರಿತ ಯುವಕರ ಸಂಘಟನೆಗಳು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ರಾಜ್ಯೋತ್ಸವ ಆಚರಿಸುತ್ತಿದ್ದಾರೆ ಅದಕ್ಕಾಗಿ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯೋತ್ಸವದಂತಹಾ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದು ವಿರ್ಪಯಾಸವೆಂದ ಕೆಪಿಸಿಸಿ ಕಾರ್ಯಕಾರಣಿ ಸದಸ್ಯರು ರಾಜ್ಯದಲ್ಲಿ ಬದುಕು ಮಾಡುತ್ತಿರುವ ಎಲ್ಲರೂ ಕನ್ನಡ ಪ್ರೇಮವನ್ನು ಬೆಳೆಸಿಕೊಂಡು ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬೇಕು ಎಂದು ಮನವಿ ಮಾಡಿದರು.
ರಾಜ್ಯದ ನೆಲ, ಜಲ ಮತ್ತು ಗಡಿ ಭಾಗದಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಉತ್ತಮ ಸ್ಪಂದನೆ ನೀಡಬೇಕು ಆಗ ಮಾತ್ರ ಕನ್ನಡಕ್ಕಾಗಿ ಹೋರಾಟ ಮಾಡುವುದು ತಪ್ಪಲಿದೆ ಎಂದ ದೊಡ್ಡಸ್ವಾಮೇಗೌಡ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕನ್ನಡದ ಪರವಾಗಿ ಯೋಜನೆಗಳನ್ನು ಜಾರಿಗೊಳ್ಳಲು ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗರಿಗೆ ಅನುಕೂಲ ಆಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಕೋರಿದರು.
ಬಡಾವಣೆಯ ಹಿರಿಯ ನಾಗರೀಕರಾದ ಬಿ.ಎಂ.ನಾಗರಾಜು, ಬಸವರಾಜು, ಹನುಮಶೆಟ್ಟಿ, ಕಾಳೇಗೌಡ, ವಾಸು, ಕೃಷ್ಣೇಗೌಡ, ಮಣಿಯಮ್ಮ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್ ಮತ್ತಿತರರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್, ಪುರಸಭೆ ಸದಸ್ಯ ನಟರಾಜು, ಸಂಘದ ಪದಾಧಿಕಾರಿಗಳಾದ ಪ್ರಮೋದ್, ಪ್ರಶಾಂತ್, ಮಂಜುನಾಥ್, ಚೇತನ್‌ಶೆಟ್ಟಿ, ಪರಶಿವಮೂರ್ತಿ, ವೆಂಕಟೇಶ್, ಬ್ರಾಂಡ್‌ಮAಜು, ವಕೀಲ ಕೆ.ಸಿ.ಹರೀಶ್, ವಿ.ಪ್ರಸನ್ನ, ಚಿಕ್ಕರಾಮೇಗೌಡ ಮತ್ತಿತರರು ಹಾಜರಿದ್ದರು.