ಮಂಡ್ಯ: ಅಧಿಕಾರ ಕೊಟ್ಟಾಗ ಕೆಲಸ ಮಾಡದ ಬಿಜೆಪಿ ಈಗ ಪರಿತಪಿಸುತ್ತಿದೆ. ಜೆಡಿಎಸ್ ಜಿಲ್ಲಾಧ್ಯಕ್ಷನ ತಪ್ಪಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಕೃಷಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಕೊಟ್ಟಾಗ ಕೆಲಸ ಮಾಡಿಲ್ಲ. ಇದೀಗ ಜೆಡಿಎಸ್-ಬಿಜೆಪಿ ಜೊತೆಯಲ್ಲಿ ಸಮೀಕ್ಷೆ ಮಾಡ್ತಿದ್ದಾರೆ. ಬಿಜೆಪಿ-ಜೆಡಿಎಸ್ ನ 26 ಜನ ಎಂಪಿಗಳು ಈಗ ಬರಗಾಲದ ಅಧ್ಯಯನ ಮಾಡ್ತಿದ್ದಾರೆ. ಸರ್ಕಾರ ಈಗಾಗಲೇ ಬರಗಾಲ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದೆ. ಇವರು ಈಗ ಕೇಂದ್ರಕ್ಕೆ ಮಾಹಿತಿ ಕೊಡ್ತಾರಂತೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಬರಗಾಲದ ಸಮೀಕ್ಷೆ ವರದಿ ಕೊಟ್ಟಿದೆ. ಸರ್ಕಾರ ಹಾಗೂ ಅಧಿಕಾರಿಗಳು ಅಧ್ಯಯನ ಮಾಡಿದ್ದಾರೆ. ಅವರು ಕೊಟ್ಟಿರುವ ವರದಿಯನ್ನು ನೋಡಿ ಪರಿಹಾರ ಬಿಡುಗಡೆ ಮಾಡಿ ಅನ್ನೋಕೆ ಇವರು ತಯಾರಿಲ್ಲ. ರಾಜಕೀಯ ತೀಟೆಗೋಸ್ಕರ ಬರ ಅಧ್ಯಯನ ಮಾಡ್ತಿದ್ದಾರೆ. ಯಾರೋ ಪಾಪ ಜೆಡಿಎಸ್ ಅಧ್ಯಕ್ಷ ನಾನೇ ಒಂದುಸಲ ಪಾಪದ ಕೆಲಸ ಮಾಡಿದೆ.
ಬಹಳ ಜನ ಬೇಡಾ ಅಂದ್ರು. ಇರಲಿ ಸ್ವಲ್ಪ ದಿನ ಅನೇಕ ಬಾರಿ ತಪ್ಪು ಮಾಡಿದ್ರೆ ಪನಿಶ್ ಮೆಂಟ್ ಆಗುತ್ತೆ. ಕಾಯಬೇಕು, ಆ ತಾಳ್ಮೆ ದೇವರು ಕೊಡ್ಲಿ. ಬಾಯಿಗೆ ಬಂದಾಗೆ ಮಾತನಾಡಿದ್ದಾರೆ ಇರಲಿ ಎಂದು ಹೇಳಿದರು.
ನಾನು, ನಮ್ಮ ಕಾಂಗ್ರೆಸ್ ಪಕ್ಷ ಯಾರಿಂದಲೂ ಹೇಳಿ ಕೇಳಿ ಕೆಲಸ ಮಾಡುವುದನ್ನ ಬೆಳಸಿಕೊಂಡಿಲ್ಲ. ನಮಗೆ ಅವಕಾಶ ಸಿಕ್ಕಾಗ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.