ಮೈಸೂರು: ದಸರಾ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ 2ನೇ ಬಾರಿ ಮೈಸೂರಲ್ಲಿ ನಡೆದಿದ್ದು, ಈ ಛಾಯಾಚಿತ್ರ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಛಾಯಾಗ್ರಾಹಕ ರವಿಶಂಕರ್ ಜಿ.ಎಸ್ ಅವರಿಗೆ ಪ್ರಶಸ್ತಿ ಲಭಿಸಿದೆ.
ಛಾಯಾಚಿತ್ರ ಸ್ಪರ್ಧೆಯ 1.Open colour ( ಬಣ್ಣದ ಚಿತ್ರಗಳು ) 2.Monochrome ( ಕಪ್ಪು ಬಿಳುಪು ಚಿತ್ರ ) 3. Nature ( ಪ್ರಕೃತಿ ) 4. Photo travel ( ಪ್ರವಾಸಿ ತಾಣಗಳು ) ಎಂಬ ನಾಲ್ಕು ವಿಭಾಗಗಳಲ್ಲಿ ಮೂರು ವಿಭಾಗದಲ್ಲಿ ಮೂರು ಪ್ರಶಸ್ತಿಗಳು ರವಿಶಂಕರ್ ಚಿತ್ರಕ್ಕೆ ಲಭಿಸಿದೆ.
ಓಪನ್ ಕಲರ್ ವಿಭಾಗದಲ್ಲಿ ಕಂಬಳ ಚಿತ್ರಕ್ಕೆ *_ಮೈಸೂರು ದಸರಾ ಬೆಳ್ಳಿ ಪದಕ, ನೇಚರ್ ವಿಭಾಗದಲ್ಲಿ ಹಾರುತ್ತಿರುವ ಮಿಂಚುಳ್ಳಿ ಚಿತ್ರಕ್ಕೆ ಮೈಸೂರು ದಸರಾ ಬೆಳ್ಳಿ ಪದಕ ಮತ್ತು ಫೋಟೋ ಟ್ರಾವೆಲ್ ವಿಭಾಗದಲ್ಲಿ ನಮ್ಮ ಮೈಸೂರಿನ ಅರಮನೆಯ ಚಿತ್ರಕ್ಕೆ ಪ್ರಶಂಸನ ಪತ್ರ ದೊರಕಿದೆ.