Saturday, April 19, 2025
Google search engine

Homeರಾಜ್ಯಸುದ್ದಿಜಾಲಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ: ಭಕ್ತ ಸಾಗರ

ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ: ಭಕ್ತ ಸಾಗರ

ಚಾಮರಾಜನಗರ: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿ ಮನೆಗಳಲ್ಲಿ ಮಾತ್ರವಲ್ಲದೆ ದೇವಾಸ್ಥಾನಗಳಲ್ಲೂ ದೀಪಾವಳಿಯ ವಿಶೇಷ ದಿನಗಳಂದು ವಿವಿಧ ಪೂಜೆಗಳು, ರಥೋತ್ಸವಗಳು ನೆರವೇರುತ್ತವೆ. ನಾಡಿನ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿ ದೀಪಾವಳಿ ರಥೋತ್ಸವ ನೆರವೇರಿತು.

ಬೆಳಗ್ಗೆ ೮.೫೦ ರಿಂದ ೯.೧೦ ರವರಗಿನ ಶುಭ ಲಗ್ನದಲ್ಲಿ ಸಾಲೂರು ಮಠದ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ನಡೆಯಿತು. ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸಕಲ ವ್ಯವಸ್ಥೆಯನ್ನು ಕೈಗೊಂಡಿದ್ದರು. ಮಲೆ ಮಹದೇಶ್ವರ ಬೆಟ್ಟದ ಬೇಡಗಂಪಣ ಸಮುದಾಯದ ಅರ್ಚಕರಿಂದ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ರಥಕ್ಕೆ ಬೆಲ್ಲದಾರತಿ ಮಾಡಿದರು. ಅದಾದ ಬಳಿಕ ರಥವನ್ನು ಲಕ್ಷಾಂತರ ಮಂದಿ ಭಕ್ತರು ಎಳೆದರು. ಕಳೆದ ೩ ದಿನಗಳಿಂದ ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯದಿಂದ ೪-೫ ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ. ಅದಲ್ಲದೆ ನೂರಾರು ಯುವಕರ ತಂಡವೂ ಕ್ಷೇತ್ರಕ್ಕೆ ಪಾದಯಾತ್ರೆ ಮಾಡಿ ಹರಕೆ ತೀರಿಸಿದರು.

RELATED ARTICLES
- Advertisment -
Google search engine

Most Popular