ಹೊಸೂರು : ಭಾರತದ ಇಂದಿನ ಆರ್ಥಿಕ ವ್ಯವಸ್ಥೆಯನ್ನು ಭದ್ರಪಡಿಸಲು ಮತ್ತು ಪ್ರಗತಿಗೆ ಸಹಕಾರ ಸಂಘಗಳು ತಮ್ಮದೇ ಆದ ಸಹಕಾರ ನೀಡಿವೆ ಎಂದ ಶಾಸಕ ಡಿ.ರವಿಶಂಕರ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ೭೦ನೇ ಅಖಿನ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರವು ಡೈರಿ, ಸಹಕಾರ ಸಂಘಗಳು ಮತ್ತು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಜನರ ಬದುಕು ಕಟ್ಟಿಕೊಡಲು ಕಾರಣವಾಗುತ್ತಿದ್ದು ಈ ಕ್ಷೇತ್ರವನ್ನು ಭದ್ರಪಡಿಸಿಕೊಂಡು ಹೋಗುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಸಹಕಾರ ಸಂಘಗಳಲ್ಲಿ ೫ವರ್ಷಕ್ಕೆ ಒಮ್ಮೆ ನಡೆಯುವ ಚುನಾವಣೆಗಳನ್ನು ರಾಜಕೀಯ ದ್ವೇಷವಾಗಿ ಸ್ವೀಕರಿಸದೇ ಮುಂದಿನ ದಿನಗಳಲ್ಲಿ ಸಂಘಗಳ ಅಭಿವೃದ್ಧಿಗೆ ಮುಂದಾಗ ಬೇಕು ಆಗ ಮಾತ್ರ ಸಂಘಗಳ ಅಭಿವೃದ್ಧಿಗೆ ಸಹಕಾರವಾಗಿಲ್ಲಿದ್ದು ರಾಜ್ಯ ಮತ್ತು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಯಶಸ್ವಿಗೆ ಶ್ರಮಿಸುತ್ತಿರುವ ಶಾಸಕ ಜಿ.ಟಿ.ದೇವೇಗೌಡ ಮತ್ತು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ
ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಹಕಾರ ಸಚಿವರ ಖಾತೆಯನ್ನು ಮಿಸಲು ಇಟ್ಟು ೯೦೦ಕೋಟಿಗಳನ್ನು ಇಲ್ಲಿಗೆ ನೀಡಿ ಸುಮಾರು ೬೩ ಸಾವಿರ ಸಂಘಗಳು ಗುಣ ಮಟ್ಟದಲ್ಲಿ ಬೆಳೆಸಲು ಮುಂದಾಗಿರುವುದು ಸಹಕಾರ ಕ್ಷೇತ್ರಗಳಿಗೆ ಬಲ ಬಂದಿದೆ ಎಂದರು.
ಜನರ ಆರೋಗ್ಯ ದೃಷ್ಟಿಯಿಂದ ತರಲಾದ ಯಶಸ್ವಿನಿ ಯೋಜನೆಯು ಇಂದು ಲಕ್ಷಾಂತರ ಮಂದಿಯ ಆರೋಗ್ಯ ರಕ್ಷಣೆಗೆ ಕಾರಣವಾಗಿದ್ದು ಎಲ್ಲರು ಕಡ್ಡಾಯವಾಗಿ ಈ ಯೋಜನೆಯ ಪಾಲುದಾರರಾಗಿ ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಜನರ ಆರ್ಥಿಕತೆ ಸುಸ್ಥಿತಿಗೆ ಬರಲು ಹೈನುಗಾರಿಯು ಪ್ರಮುಖ ಪಾತ್ರವಹಿಸುತ್ತಿದ್ದು ಇದಕ್ಕಾಗಿ ಸರ್ಕಾರ ಮತ್ತು ಸಹಕಾರ ಇಲಾಖೆ ಶ್ರಮಿಸುತ್ತಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಡೈರಿಗಳ ಅಭಿವೃದ್ದಿ, ಹೈನುಗಾರಿಕೆಯಿಂದ ಮತ್ತು ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಸಿಗುವ ಲಾಭದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್, ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರನ್ನು ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ ಮೂಡಬಿದ್ರೆಯ ಕೆ.ಐ.ಸಿ.ಎಂ.ನ ಪ್ರಾಂಶುಪಾಲ ಡಾ.ಎಂ.ವಿಶ್ವೇಶ್ವರಯ್ಯ ಸಾಲೇತರ ಸಂಘಗಳ ಪುನಂಶ್ಚೇತನ ಹಾಗು ಆರ್ಥಿಕತೆಯ ಸೇರ್ಪಡೆಯ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಹರಿಚಿದಂಬರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಕುಕ್ಕುಟ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಸಿದ್ದೇಗೌಡ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಟಿ.ರಾಮೇಗೌಡ,ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಚ್.ಸುಬ್ಬಯ್ಯ, ಟಿಎಪಿಎಂಎಸ್ ಅಧ್ಯಕ್ಷ ಪರಶಿವಮೂರ್ತಿ, ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಜಿಲ್ಲಾ ಹಾಲು ಒಕ್ಕೂಟದ ಎಂ.ಡಿ.ವಿಜಯಕುಮಾರ್, ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕ ಹರೀಶ್, ಸಹಕಾರ ಸಂಘದ ನಿಬಂಧರಾದ ಅನುಸೂಯ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಕುಮಾರ್, ಕಾಂಗ್ರೇಸ್ ಮುಖಂಡ ಎಲ್.ಐಸಿ.ಜಗದೀಶ್, ಸಹಕಾರ ಸಂಘದ ಸಿಇಓಗಳಾದ ಚಂದ್ರಕಲಾ, ದುಶ್ಯತ್, ಆನಂತ್, ಮಹದೇವ, ಜಯಣ್ಣ,ರವಿ,ಮಂಜು,ಸಚಿನ್ ಕುಮಾರ್,ಸುರೇಶ, ಚಂದ್ರಶೇಖರ್,ಕೃಷ್ಣೇಗೌಡ,ಭಾಸ್ಕರ್, ಪುಟ್ಟೇಗೌಡ, ಪುನೀತಾ, ಸಂತೋಷ್,ಜಯರಾಜ್, ಹೊಸೂರು ಎಂ.ಡಿ.ಸಿ.ಸಿ.ಬ್ಯಾಂಕಿನ ವ್ಯವಸ್ಥಾಪಕ ಆಯಿರಹಳ್ಳಿ ಪ್ರತಾಪ್, ಹಾಲು ಒಕ್ಕೂಟದ ವ್ಯವಸ್ಥಾಪಕ ವಿಜಯಕುಮಾರ್, ಮ್ಯಾನೇಜರ್ ಡಾ.ದಿವಕಾರ್, ಬಿಎಂಸಿ ಮ್ಯಾನೇಜರ್ ಸಂತೋಷ್, ಸಹಾಯಕ ಉಪ ವ್ಯವಸ್ಥಾಪಕ ಡಾ.ಪ್ರವೀಣ್ ಪತ್ತಾರ್, ಅಭಿಷೇಕ್,ರಶ್ಮಿ,ವರಲಕ್ಷ್ಮಿ,ನೇಮಣ್ಣ ಮಖಾನಿ, ಸೇರಿದಂತೆ ಮತ್ತಿತರರು ಹಾಜರಿದ್ದರು.
ಕೇಂದ್ರ ಸರ್ಕಾರವು ಆರಂಭಿಸಿರುವ ಜನೌಷಧ ಕೇಂದ್ರಗಳ ಮಾದರಿಯಲ್ಲಿ ಸಹಕಾರ ಕ್ಷೇತ್ರದ ಮೂಲಕವು ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಔಷಧಿಕೇಂದ್ರಗಳನ್ನು ತೆರದು ರಿಯಾಯಿತಿ ದರದಲ್ಲಿ ರೋಗಿಗಳಿಗೆ ಬೇಕಾದ ಔಷಧಗಳನ್ನು ಮರಾಟ ಮಾಡಲು ಸಹಕಾರ ಇಲಾಖೆಯು ಮುಂದಾಗಬೇಕು ಇದರಿಂದ ಜನರಿಗೆ ಅನುಕೂಲವಾಗುವುದರ ಜತಗೆ ಸಹಕಾರ ಇಲಾಖೆಗೂ ಲಾಭ ದೊರೆಯಲಿದೆ.
-ಕೆ.ಎನ್.ಬಸಂತ್ ಅಧ್ಯಕ್ಷರು, ನವನಗರ ಅರ್ಬನ್ ಬ್ಯಾಂಕ್ ಕೆ.ಆರ್.ನಗರ