Sunday, April 20, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ: ಶ್ರೀ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ

ಪಿರಿಯಾಪಟ್ಟಣ: ಶ್ರೀ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ

ಪಿರಿಯಾಪಟ್ಟಣ: ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿನ ಶ್ರೀ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ದೀಪಾವಳಿ ಹಬ್ಬದ ಸಂದರ್ಭ ದೇವಾಲಯ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಲ್ಕು ದಿನ ಜಾತ್ರಾ ಮಹೋತ್ಸವ ಜರುಗುವುದು ಇಲ್ಲಿನ ವಿಶೇಷವಾಗಿದೆ, ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಸೇರಿದಂತೆ ಒಟ್ಟಾರೆ ಲಕ್ಷಕ್ಕೂ ಹೆಚ್ಚು ಭಕ್ತರು ಈ ಬಾರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ್ದು ವಿಶೇಷವಾಗಿತ್ತು, ಅರ್ಚಕರಾದ ಲೋಕೇಶ್, ಪುಟ್ಟಸ್ವಾಮಿ, ತೋಂಟಪ್ಪ ಶಾಸ್ತ್ರಿಗಳ ತಂಡದ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು.

ದೀಪಾವಳಿಯಂದು ದೇವಾಲಯ ಆವರಣದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ಉತ್ಸವ ನಡೆಯಿತು ಈ ವೇಳೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಹಾಗೂ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಅಚ್ಚುಕಟ್ಟಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಸಂಜೆ ದೇವಾಲಯ ಮುಂಭಾಗದಲ್ಲಿ ಹಾಕಿದ್ದ ಕೊಂಡವನ್ನು ಅರ್ಚಕರು ಸೇರಿದಂತೆ ಹರಕೆ ಹೊತ್ತ ಸಾವಿರಾರು ಭಕ್ತಾದಿಗಳು ಹಾಯ್ದು ಹರಕೆ ತೀರಿಸಿ ದೇವರಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ದೇವಾಲಯ ಆವರಣದಲ್ಲಿ ವಿವಿಧ ಬಗೆ ಸಿಹಿ ತಿಂಡಿ ಪುರಿಕಾರ ಮಕ್ಕಳ ಆಟಿಕೆ ಗೃಹಪಯೋಗಿ ವಸ್ತು ಮಾರಾಟ ಸೇರಿದಂತೆ ತಿಂಡಿ ತಿನಿಸು ವ್ಯಾಪಾರ ಭರ್ಜರಿಯಾಗಿತ್ತು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್, ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ಗಾಗಿ ದೇವಾಲಯ ಆವರಣ ಸುತ್ತ ಬ್ಯಾರಿಕೇಡ್ ಇರಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದರು.

ಜಾತ್ರೆಯ ಕಡೆಯ ದಿನ ಬುಧವಾರ ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಹಾಗೂ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಪಾನಕ ಕೋಸಂಬರಿ ಮುದ್ದೆ ಅನ್ನ ಕುಂಬಳಕಾಯಿ ಸಾಂಬಾರ್ ಬೆಲ್ಲದ ಪಾಯಸ ಪಂಚಾಮೃತ ಭೂದಗುಂಬಳಕಾಯಿ ಹಾಗೂ ಕಾಳಿನ ಪಲ್ಯ ಮಜ್ಜಿಗೆ ವಿತರಿಸಲಾಯಿತು, ದೇವಾಲಯ ಪ್ರಾಂಗಣ ಹಾಗೂ ಬ್ಯಾರಿಕೆಡ್ ಅಳವಡಿಸಿದ್ದ ಸ್ಥಳದಲ್ಲಿ ಭಕ್ತರು ಸರತಿ ಸಾಲಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ರಾವಂದೂರು ಮುರುಗ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾಜಿ ಶಾಸಕರಾದ ಎಚ್.ಸಿ ಬಸವರಾಜು, ಕೆ.ಮಹದೇವ್, ಸಚಿವ ಕೆ.ವೆಂಕಟೇಶ್ ಪುತ್ರ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

RELATED ARTICLES
- Advertisment -
Google search engine

Most Popular