ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ಲಷ್ಕರ್ ಮೊಹಲ್ಲಾದಲ್ಲಿ ಬೆಂಕಿ ಅನಾಹುತದಿಂದ ಸಂಕಷ್ಟಕ್ಕೀಡಾಗಿದ್ದ ಬಾಲನಂದ ಎಂಬುವರ ಮನೆ ಮತ್ತು ಕಾರ್ಖಾನೆಗೆ ಶಾಸಕ ಕೆ.ಹರೀಶ್ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೇ, ತುರ್ತಾಗಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಕಿ ಅನಾಹುತದಿಂದ ಕಾರ್ಖಾನೆ ಹಾಗೂ ಮನೆಯಲ್ಲಿ ಅಪಾರ ಪ್ರಮಾಣ ವಸ್ತುಗಳು ಸುಟ್ಟು ಹೋಗಿ ಕುಟುಂಬ ಬೀದಿಗೆ ಬಿದ್ದಿದೆ. ಯಾವುದೇ ಕಾರಣಕ್ಕೂ ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಲೀಕರಾದ ಜಯಂತ್, ಎಸ್.ಆರ್. ರವಿಕುಮಾರ್, ವೆಂಕಿ, ನಗರ ಪಾಲಿಕೆ ಸದಸ್ಯರಾದ ಬಾಲರಾಜ್, ರವಿ(ಜೆಸ್ಕೋ), ಮನು ಗೌಡ, ಪ್ರವೀಣ್, ನಂಜುಂಡಿ, ಭರತ್ ದೇವಾಂಗ, ಮಹೇಶ್ ಮುಂತಾದವರು ಇದ್ದರು.