ಮಂಡ್ಯ: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಇಂದಿನ ಕಾವೇರಿ ಹೋರಾಟಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ನೌಕರರು ಬೆಂಬಲ ಸೂಚಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಬಳಿಕ ಬೆಂ-ಮೈ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಳೆದ 73 ದಿನಗಳಿಂದ ನಡೆಯುತ್ತಿರುವ ನಿರಂತರವಾಗಿ ಧರಣಿ ನಡೆಯುತ್ತಿದ್ದು, ರಾಜ್ಯ ಸರ್ಕಾರ, ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ.
ರಸ್ತೆ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಪ್ರಾಧಿಕಾರದ ಮುಂದೆ ಸರಿಯಾದ ವಾದ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ. ಬಜೆಟ್ ಲೆಕ್ಕಾಚಾರ ಹಾಕುವ ಸರ್ಕಾರ ನೀರಿನಲ್ಲು ಲೆಕ್ಕಾಚಾರ ಹಾಕಿ. ಬಳಿಕ ಪಕ್ಷದ ತಮಿಳುನಾಡಿಗೆ ಬಿಡಿ ಎಂದು ಒತ್ತಾಯಿಸಿದರು.
ನಮ್ಮ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿ, ತಮಿಳುನಾಡು ಉದ್ದಾರ ಮಾಡಲು ಮುಂದಾಗಿದ್ದಾರೆ. ಪ್ರಾಧಿಕಾರ ಕೂಡ ಸಹ ಎರಡೂ ರಾಜ್ಯದಲ್ಲಿ ನೀರಿನ ಸಮೀಕ್ಷೆ ಮಾಡಿ ಆದೇಶ ಕೊಡಿ. ಎಲ್ಲೊ ಕುಳಿತು ಆದೇಶ ಮಾಡುವುದನ್ನ ಬಿಟ್ಟು ಪರಿಶೀಲನೆ ಮಾಡಿ. ತಕ್ಷಣವೇ ಸರ್ಕಾರ ತೂಕಡಿಸದೆ ಎಚ್ಚೆತ್ತು ನೀರನ್ನು ಉಳಿಸುವ ಕೆಲಸ ಮಾಡಿ ರೈತರಿಗೆ ನ್ಯಾಯ ಒದಗಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.