ಕೋಲಾರ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಆದೇಶ ಹೊರಡಿಸಿದ್ದಾರೆ.
ಕಳೆದ ಶನಿವಾರ ಬಂಗಾರಪೇಟೆ ವೃತ್ತದಲ್ಲಿರುವ ಬಾರ್’ನ ಸಿಬ್ಬಂದಿ ತನಗೆ ನಮಸ್ಕಾರ ಹೇಳಿಲ್ಲವೆಂದು ಕುಡಿದ ಮತ್ತಿನಲ್ಲಿ ಎಎಸ್’ಐ ನಾರಾಯಣಸ್ವಾಮಿ ಗಲಾಟೆ ಮಾಡಿದ್ದು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಎಎಸ್ ಐ ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಪ್ರಕರಣ ಸಂಬಂಧ ಎಎಸ್ ಐ ನಾರಾಯಣ ಸ್ವಾಮಿ ಬಾರ್ ಸಿಬ್ಬಂದಿ ವಿರುದ್ಧ ಎಸ್ ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ಸಮೇತ ಎಎಸ್ ಐ ನಡೆ ವಿರುದ್ಧ ಬಾರ್ ಅಸೋಷಿಯೇಷನ್ ಎಸ್ ಪಿಗೆ ದೂರು ನೀಡಿದೆ. ಹೀಗಾಗಿ ಇಲಾಖೆಗೆ ಅಗೌರವ, ದುರ್ನಡತೆ, ಬೇಜವಾಬ್ದಾರಿ, ಉದಾಸೀನ ತೋರಿದ ನಾರಾಯಣ ಸ್ವಾಮಿಯನ್ನು ಅಮಾನತು ಮಾಡಲಾಗಿದೆ.