ಮೈಸೂರು: ಮೈಸೂರಲ್ಲಿ ಹನಿಟ್ರ್ಯಾಪ್’ಗೆ ಉಪನ್ಯಾಸಕರೊಬ್ಬರು ಸಿಲುಕಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಜ ಕಾಲೇಜಿನ ಉಪನ್ಯಾಸಕ ಪ್ರೊ.ರಂಗನಾಥ್ ಎಂಬುವವರು ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ ಎಂದು ಕಳೆದ ಮೂರು ದಿನಗಳ ಹಿಂದೆ ಪ್ರಕರಣ ದಾಖಲಿಸಿದ್ದು, ಈಗ ಬೆಳಕಿಗೆ ಬಂದಿದೆ.
ದೂರಿನಲ್ಲೇನಿದೆ ?
ತನ್ನ ಸ್ನೇಹಿತ ಕಲ್ಲೇಶ್ ಎಂಬುವವರಿಂದ ದೇವಿಕಾ ಮತ್ತು ಶ್ರೀನಿವಾಸ್ ಪರಿಚಯವಾಗಿದ್ದು, ದೇವಿಕಾ ನನ್ನನ್ನು 2-3 ಬಾರಿ ಭೇಟಿಯಾಗಿ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ರಂಗನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿಕ ಮಧ್ಯಾಹ್ನ ದೇವಿಕ ರಂಗನಾಥ್ ಅವರನ್ನು ಭೇಟಿಯಾಗಿ ನಾನು ವಿಶ್ವಕರ್ಮ ಜನಾಂಗದವಳಾದರೂ ಪರಿಶಿಷ್ಟ ಪಂಗಡವನಾದ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಿರಾಕರಿಸಿದೆ ಎಂದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಎದುರಿಗೆ ಜಾತಿನಿಂದನೆ ನಿಂದಿಸಿದ್ದಾರೆ. ಅಲ್ಲದೇ ದೇವಿಕಾ ಜೊತೆಯಿರುವ ನನ್ನ ಫೋಟೊ ಮತ್ತು ಸಂಭಾಷಣೆಯನ್ನು ತನ್ನ ಪತ್ನಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ನಂತರ ಹಣಕ್ಕೆ ಬೇಡಿಕೆಯಿಟ್ಟಿದ್ದು, 32500 ರೂ.ಗಳನ್ನು ನೀಡಿದ್ದೇನೆ. ಇದಾದ ನಂತರ ಹಣ ನೀಡಲು ನಿರಾಕರಿಸಿದ್ದಕ್ಕೆ ಶ್ರೀನಿವಾಸ್ ಎಂಬ ವ್ಯಕ್ತಿ ನನ್ನನ್ನು ಮೈಸೂರಿನಲ್ಲಿ ಗ್ರೀನ್ ಫುಡ್ ಕೋರ್ಟ್ ನಲ್ಲಿ ಭೇಟಿಯಾಗಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಕಲ್ಲೇಶ್ ಅವರಿಂದ ಕರೆ ಮಾಡಿಸಿ 10 ಲಕ್ಷ ನೀಡಿದರೆ ದೇವಿಕಾ ನಿನಗೆ ಕಿರುಕುಳ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ನನ್ನನ್ನು ಬೆದರಿಸಿ ಹಣ ಪಡೆದು, ಜಾತಿ ನಿಂದನೆ ಮಾಡಿ ಮತ್ತುಷ್ಟು ಹಣಕ್ಕೆ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕಿರುವ ದೇವಿಕಾ, ಶ್ರೀನಿವಾಸ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.