ಮಂಡ್ಯ: ಕಾಂಗ್ರೆಸ್ ನವರಿಗೆ ಜವಾಬ್ದಾರಿ ಇದ್ರೆ ಅವರ ಅಧಿಕಾರಿಗಳನ್ನ ರೈತರ ಜಾಗಕ್ಕೆ ಕಳುಹಿಸಿ. ಎಸಿ ರೂಂ ನಲ್ಲಿ ಕುಳಿತು ವರದಿ ಕಳಿಸುವುದಲ್ಲ ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಕಿಡಿಕಾರಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ರೈತರು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಿದ್ದಾರೆ. ಕರೆಂಟ್ ಇಲ್ಲ, ನೀರಿಲ್ಲ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಬರ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಲಾಗ್ತಿದೆ. ರೈತರ ಜಮೀನಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿದೆ. ಬರ ಅಧ್ಯಯನ ವರದಿಯನ್ನು ನಮ್ಮ ನಾಯಕ ದೇವೇಗೌಡ್ರು, ಕುಮಾರಸ್ವಾಮಿ ಅವರಿಗೆ ತಲುಪಿಸುತ್ತೇವೆ ಎಂದು ಹೇಳಿದರು.
ಡಿ.4 ರಂದು ಅಧಿವೇಶನ ನಡೆಯುತ್ತೆ. ನಮ್ಮ ಶಾಸಕರು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತೇವೆ ಎಂದರು.
ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಈ ರಾಜ್ಯ ಸರ್ಕಾರ ರೈತರಿಗರ ಏನು ಮಾಡಿದೆ? ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ. ಕೇಂದ್ರದ ನೆರವು ಕೋರಿ, ರೈತರ ಕಷ್ಟಕ್ಕೆ ಬನ್ನಿ. ಬ್ಯಾಂಕ್ ನಿಂದ ತರ್ತಿರೋ, ಕೇಂದ್ರದಿಂದ ತರ್ತಿರೋ ಗೊತ್ತಿಲ್ಲ. ರೈತರನ್ನ ಮೊದಲು ಕಾಪಾಡಿ ಎಂದು ಹೇಳಿದರು.