ಹನೂರು: ಬೆಳೆ ಪರಿಹಾರ, ಬೆಳೆವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಮತ್ತು ಇತರೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಎಫ್.ಐ.ಡಿ ಕಡ್ಡಾಯ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರದಂದು ಹನೂರು ಪಟ್ಟಣದ ತಹೀಸಿಲ್ದಾರ್ ಕಚೇರಿಯಲ್ಲಿ ಮಾತನಾಡಿದ ಅವರು ಬೆಳೆ ಪರಿಹಾರ, ಬೆಳೆವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಮತ್ತು ಇತರೆ ಸರ್ಕಾರದ ಸೌಲಭ್ಯ ಪಡೆಯಲು ಎಫ್.ಐ.ಡಿ ಕಡ್ಡಾಯವಾಗಿರುತ್ತದೆ. ಈಗಾಗಲೇ ಎಫ್.ಐ.ಡಿ ಮಾಡಿಸಿಕೊಂಡಲ್ಲಿ ಆ ಎಫ್.ಐ.ಡಿಗೆ ನಿಮಗೆ ಸಂಬಂಧಸಿದಂತೆ ಎಲ್ಲಾ ಜಮೀನುಗಳ ಸರ್ವೇ ನಂಬರ್ ಗಳು ಜೋಡಣೆಯಾಗಿದೆಯೇ?ಎಂಬುದನ್ನು ಕೂಡಲೇ ಖಾತರಿಪಡಿಸಿಕೊಳ್ಳಿ ಎಂದರು.
ತಮ್ಮ ಎಫ್.ಐ.ಡಿಗೆ ತಮ್ಮ ಬ್ಯಾಂಕ್ ಖಾತೆ ಜೋಡಣೆಯಾಗಿರುವ ಪರಿಶೀಲಿಸಿಕೊಳ್ಳುವುದು. ಇನ್ನೂ ಎಫ್.ಐ.ಡಿಯಾಗದ ಜಂಟಿ ಖಾತೆ ಇದ್ದಲ್ಲಿಖಾತೆದಾರರು ಕಡ್ಡಾವಾಗಿ ಆಧಾರ ಕಾರ್ಡ್, ಇತ್ತೀಚಿನ ಪಹಣಿಗಳು, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ ಈ ದಾಖಲಾತಿಗಳೊಂದಿಗೆ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ, ಹಾಗೂ ಪಶು ಸಂಗೋಪನಾ ಇಲಾಖೆಗಳನ್ನು ಈ ಕೂಡಲೇ ಸಂಪರ್ಕಿಸಿ ಎಫ್.ಐ.ಡಿ ನೋಂದಣೆ ಮಾಡಿಸಿಕೊಳ್ಳಲು ಈ ಮೂಲಕ ರೈತ ಬಾಂಧವರಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಸುಂದರಮ್ಮ ಇನ್ನಿತರರು ಹಾಜರಿದ್ದರು.