Saturday, April 19, 2025
Google search engine

Homeರಾಜ್ಯಸುದ್ದಿಜಾಲಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪೂರ್ವಭಾವಿ ಸಭೆ

ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪೂರ್ವಭಾವಿ ಸಭೆ

ಡಿ.10ರಿಂದ ನಾಲ್ಕು ದಿನಗಳು ಗ್ರಾಮೀಣ ಸಂಪ್ರದಾಯದoತೆ ಜಾತ್ರೆ

ಎಚ್ ಡಿ ಕೋಟೆ: ಸರಗೂರು ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ ತಿಂಗಳಲ್ಲಿ ಕಡೆ ಕಾರ್ತಿಕ ಮಾಸದಂದು ನಡೆಯಲಿರುವ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಿಯಮ ಅನುಸಾರವಾಗಿ ಎಂದಿನoತೆ ಆಚರಿಸಲು ನಿರ್ಧರಿಸಲಾಯಿತು.
ಹೆಡಿಯಾಲ ಹರ್ಷ ಕಲ್ಯಾಣ ಮಂಟಪದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿ.10ರಿಂದ ನಾಲ್ಕು ದಿನಗಳು ಗ್ರಾಮೀಣ ಸಂಪ್ರದಾಯದoತೆ ಜಾತ್ರೆ ನಡೆಯಲಿದೆ. ಇದಕ್ಕೆ ಸಾರ್ವಜನಿಕರು, ಇಲಾಖಾಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ರುಕೀಯಾ ಬೇಗಂ ಹೇಳಿದರು.
ಎಸಿಎಫ್ ಪರಮೇಶ್ ಮಾತನಾಡಿ ಹಿಂದಿನ ವರ್ಷದಲ್ಲಿ ಏನು ಇರುತ್ತಿತ್ತು ಅದೆ ರೀತಿ ಮಾಡಿ, ಸಮಿತಿ ಹಾಗೂ ಸಾರ್ವಜನಿಕರು ಹೇಳಿದ ಹಾಗೆ ಮಾಡುವುದಕ್ಕೆ ನಾವು ಯಾವುದೇ ಕ್ರಮ ವಹಿಸಿಕೊಳ್ಳುದಕ್ಕೆ ಅಧಿಕಾರ ಇರುವುದಿಲ್ಲ.ಏಕೆಂದರೆ ನಮ್ಮ ಮೇಲಿನ ಅಧಿಕಾರಿಗಳಿಗೆ ಗಮನಕ್ಕೆ ತಂದು ನಂತರ ಕ್ರಮ ಕೈಗೊಳ್ಳಬೇಕು ಎಂದರು.

ಖಾಸಗಿ ಮತ್ತು ಜಾನುವಾರು ಗಳಿಗೆ ಭಕ್ತಾಧಿಗಳಿಗೆ ಊಟ, ತಿಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಎತ್ತಿನಗಾಡಿ, ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಿದರು. ಬೇಲದಕುಪ್ಪೆ ಮಹದೇಶ್ವರ ಸಮಿತಿ ಅಧ್ಯಕ್ಷ ನಿಂಗರಾಜು ಮಾತನಾಡಿ ಈ ಬಾರಿ ಮುಜರಾಯಿ ಇಲಾಖೆ ಗೆ ದೇವಸ್ಥಾನ ಸೇರಿಕೊಂಡಿದೆ . ಆದ್ದರಿಂದ ವಿಜೃಂಭಣೆಯಿಂದ ಆಚರಿಸುವ ನಂಬಿಕೆ ಇದೆ. ಎಲ್ಲ ಇಲಾಖೆ ಸೇರಿಕೊಂಡು ಜಾತ್ರಾ ಮಹೋತ್ಸವ ಮಾಡಬೇಕು.
ಮುಖಂಡ ಶಂಭುಲಿಂಗನಾಯಕ ಮಾತನಾಡಿ ನಮ್ಮ ಪರಂಪರೆಯಿಂದ ಜಾತ್ರಾ ಮಹೋತ್ಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾತ್ರೆ ಮಾಡಬೇಕು.ನಾವು ನಿಮ್ಮನ್ನು ಏನು ಕೇಳುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತೇವೆ.ತಹಶೀಲ್ದಾರ್ ಅವರ ಬಳಿ ಪರವಾನಗಿ ಪಡೆದು ಜಾತ್ರೆಯನ್ನು ಮಾಡಬೇಕು. ಭಕ್ತಾಧಿಗಳ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಬೇಕು. ಜಾತ್ರೆ ಮುಗಿಯುವ ತನಕ ಪೊಲೀಸ್ ಬಂದೂಬಸ್ತು, ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದು. ಹಾಗೂ ಕೆಎಸ್ಸಾರ್ಟಿಸಿ ಇಲಾಖೆಯಿಂದ ಕಳೆದ ವರ್ಷ 70 ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಗ್ಯಾರಂಟಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ಮನವಿ ಮಾಡಿಕೊಂಡಾಗ, ಕೆಎಸ್ಸಾರ್ಟಿಸಿ ಅಧಿಕಾರಿಗಳು ಈ ಬಾರಿ 70 ರಿಂದ 100 ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯುವುದು. ರಸ್ತೆ ಕಾಮಗಾರಿ ಕೆಲಸ, ದೇವಸ್ಥಾನಕ್ಕೆ ದೀಪಾಲಂಕಾರ, ಸೌಂಡ್ಸ್, ಶಾಮಿಯಾನ, ಪಲ್ಲಕ್ಕಿ ಬೋರ್ಡ್, ಜನರೇಟರ್ ವ್ಯವಸ್ಥೆ, ದೇವರ ಮಂಟಪ ಬಿಡುವುದು. ಪೂಜಾಗೆ ಹಣ್ಣು, ಕಾಯಿ ಇತರೆ ಸಾಮಗ್ರಿಗಳನ್ನು ಮಾರಾಟಕ್ಕೆ ಅವಕಾಶ, ಸೋಮವಾರ ೧೧.೩೦ಕ್ಕೆ ಹಾಲರವೆ ಸೇವೆ, ಕೊಂಡ ಮಹೋತ್ಸವ ಕಲಾತಂಡ, ವಾದ್ಯಗೋಷ್ಠಿ, ಕೋಲಾಟ, ನಗಾರಿ ವೀರಗಾಸೆ ಸೇರಿದಂತೆ ಕಲಾತಂಡಗಳ ಅವಕಾಶಕ್ಕೆ ಅನುಮತಿ ಭಕ್ತಾಧಿಗಳಿಗೆ ಅಗತ್ಯ ಮಾಡಬೇಕು ಎಂದು ಸಮಿತಿ ಸದಸ್ಯರು ಕೇಳಿಸಿಕೊಂಡಾಗ, ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಜಾತ್ರೆ ನಡೆಸುವ ವಿಚಾರದಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಜನರ ನಡುವೆ ಕೆಲವು ಗೊಂದಲಗಳಿದ್ದು, ಜನರು ಅರಣ್ಯ ರಕ್ಷಣೆಯೊಂದಿಗೆ ಇಲಾಖೆಯ ಕಾನೂನುಗಳನ್ನು ಗೌರವಿಸಬೇಕಿದೆ. ಅದೇ ರೀತಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರ ಭಾವನೆಗಳ ಜೊತೆ ಆಟವಾಡಬಾರದು. ಈ ಭಾಗದಲ್ಲಿ ಹೀಗಾಗಿ ಅವರು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಬಾರದು ಎಂದು ತಿಳಿಸಿದರು.
ಜಾತ್ರೆ ಮಾಮೂಲಿಯಂತೆ ನಡೆಸಲು ಅವಕಾಶ ಕಲ್ಪಿಸಬೇಕು. ಬಸ್ ವ್ಯವಸ್ಥೆ ನಂಜನಗೂಡು ಮತ್ತು ಗುಂಡ್ಲುಪೇಟೆ ಹಾಗೂ ಹುಣಸೂರು, ಎಚ್ ಡಿ ಕೋಟೆ ಮತ್ತು ಸರಗೂರು ತಾಲ್ಲೂಕಿನಿಂದ ಎಲ್ಲಾ ಕಡೆಯಿಂದ ಜಾತ್ರಾ ನಡೆಯಲಿರುವ ದೇವಸ್ಥಾನದ ಬಳಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಹಾಗೂ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಜಾತ್ರೆಗೆ ಬರುವ ಜನರಿಗೆ ಹಾಗೂ ಭಕ್ತರಿಗೆ ತೊಂದರೆ ಕೊಡುವಂತವರಿಗೆ ನೋಟೀಸ್ ಜಾರಿ ನೀಡಬೇಕು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಎರಡು ಮೂರು ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರು , ಸಿಸಿಎಫ್ ಅವರ ಸಮ್ಮುಖದಲ್ಲಿ ಸಭೆಯನ್ನು ಕರೆದು ಅಂತಿಮಗೊಳಿಸಲಾಗುವುದು.
ದಡದಹಳ್ಳಿ ಮಠ ಷಡಕ್ಷರ ಸ್ವಾಮೀಜಿ , ವಿರಕ್ತ ಮಠದ ಮಹದೇವಸ್ವಾಮಿ ಸ್ವಾಮೀಜಿ ಮಾತನಾಡಿದರು.
ಮುಜರಾಯಿ ತಹಸೀಲ್ದಾರ್ ವಿದ್ಯಾಲತಾ,ಎಸಿಎಫ್ ಪರಮೇಶ್, ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್, ಎಸ್ ಐ ನಂದೀಶ್ ಕುಮಾರ್,ಆರೋಗ್ಯಾಧಿಕಾರಿ ಟಿ.ರವಿಕುಮಾರ್, ಇಓ ಸುಷ್ಮಾ,ಪಿ ಡಬ್ಲ್ಯೂ ಡಿ ಬೋರಯ್ಯ, ಉಪವಿಭಾಗದ ನೀರಾವರಿ ಎಇಇ ಉಷಾ ಲಆರ್‌ಎಫ್‌ಓ ನಾರಾಯಣ, ಉಪ ತಹಸೀಲ್ದಾರ್ ರವಿಂದ್ರ, ಕಾರ್ಯನಿರ್ವಾಹಕ ಅಧಿಕಾರಿ ರಘು,ಸಮಿತಿ ಅಧ್ಯಕ ನಿಂಗರಾಜು,ಮುಖಂಡರಾದ ಶಂಭುಲಿoಗನಾಯಕ, ಲಿಂಗರಾಜು, ಮಹದೇವಸ್ವಾಮಿ, ಮಹಾದೇವಯ್ಯ, ಗಂಗಾಧರ್, ಪ್ರಕಾಶ್, ಲಿಂಗರಾಜು, ಕೆಂಡಗಣ್ಣಪ್ಪ, ಮಹದೇವಯ್ಯ, ಸಿದ್ದರಾಜು, ನಟರಾಜು, ಪುರೋಹಿತರು ಮಹದೇವಸ್ವಾಮಿ, ರಾಕೇಶ ನಾಗೇಂದ್ರ, ಸಂಜಯ್, ಶೇಖರ್, ಬಸವಣ್ಣ, ನಾಗೇಶ,ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular