ಮಂಡ್ಯ: ಸರ್ಕಾರದ ಶಕ್ತಿಯೋಜನೆಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳೇ ಅಡ್ಡಿಯಾಗಿದ್ದು, ಸ್ಥಳೀಯ ಬಸ್ ಗೂ ಅಂತರ್ ರಾಜ್ಯ ಸ್ಟಿಕ್ಕರ್ ಅಂಟಿಸಿ ಅಧಿಕಾರಿಗಳು ಕಳ್ಳಾಟ ಮಾಡುತ್ತಿದ್ದಾರೆ.
ಸರ್ಕಾರ ಶಕ್ತಿ ಯೋಜನೆಗೆ ಒತ್ತು ನೀಡಲು ಆದೇಶ ನೀಡಿದ್ದರೂ ಕೂಡ ಅಧಿಕಾರಿಗಳಿಂದ ಯೋಜನೆಗೆ ತಡೆಯುಂಟಾಗಿದೆ.
ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ಥಳೀಯವಾಗಿ ಓಡಾಡುವ ಅಂತರಾಜ್ಯ ಸ್ಟಿಕ್ಕರ್ ಅಂಟಿಸಿ ಗೊಂದಲ ಮೂಡಿಸಲಾಗುತ್ತಿದೆ. ತಾಲೂಕಿನ ಯಲಾದಹಳ್ಳಿ ಮಾರ್ಗದ ಸ್ಥಳೀಯ ಬಸ್ ಗೂ ಅಂತರಾಜ್ಯ ಸ್ಟಿಕ್ಕರ್ ಅಂಟಿಸಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.
ಆದ್ದರಿಂದ ಗೊಂದಲಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಯಾಣಿಕರು ಆಗ್ರಹಿಸಿದ್ದಾರೆ.