Tuesday, April 22, 2025
Google search engine

Homeರಾಜ್ಯಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ: ಎನ್ ಚೆಲುವರಾಯಸ್ವಾಮಿ

ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ: ಎನ್ ಚೆಲುವರಾಯಸ್ವಾಮಿ

ಮಂಡ್ಯ: ನಮ್ಮ ಜೊತೆ ಇರುವವರು ನಮ್ಮ ಅಧಿಕಾರಿ ಇದ್ದಾರೆ. ಅವರನ್ನ ನಮ್ಮ ಸ್ಥಳಕ್ಕೆ ನಿಯೋಜನೆ ಮಾಡಿ ಅಂತ ಹೇಳ್ತಾರೆ. ಆ ರೀತಿ ಕೇಳಿದಾಗ ಅವರನ್ನ ನಿಯೋಜನೆ ಮಾಡೋದು ಏನು ಕಾನೂನು ಬಾಹಿರ.? ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಕರಣವನ್ನ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಫೋನ್ ಸಂಭಾಷಣೆ ವಿಚಾರ ಕುರಿತು ಮಂಡ್ಯದ ಕೊಪ್ಪದಲ್ಲಿ ಸಚಿವ ಚಲುವರಾಯಸ್ವಾಮಿ  ಪ್ರತಿಕ್ರಿಯಿಸಿ, ಯಾರು ಬೇಕಾದರೂ ನಮ್ಮನ್ನ ವರ್ಗಾವಣೆ ಬಗ್ಗೆ ಕೇಳಬಹುದು, ನಾವು ವರ್ಗಾವಣೆ ಮಾಡಬಹುದು. ಆ ರೀತಿ ವರ್ಗಾವಣೆ ಮಾಡೋದು ಅಪರಾಧವಲ್ಲ ಎಂದು ಹೇಳಿದರು.

ಇವ್ರನ್ನೆಲ್ಲ ಕೇಳಿ ವರ್ಗಾವಣೆ ಮಾಡಬೇಕಿಲ್ಲ. ಹಿಂದೆ ನಾವಾ ವಿಜಯೇಂದ್ರ ಬಗ್ಗೆ ಮಾತನಾಡಿದ್ದು.? ಯತ್ನಾಳ್ ಮಾತನಾಡಿದ್ದು, ಅವ್ರನ್ನ ಪಾರ್ಟಿಯಿಂದ ತೆಗೆದಿದ್ದಾರಾ.? ರಮೇಶ್ ಜಾರಕಿಹೊಳಿ ಅವ್ರ ಮೇಲೆ ಆರೋಪ ಮಾಡಿ ಮಂತ್ರಿ ಆಗದಂತೆ ನೋಡಿಕೊಂಡ್ರು. ಇವತ್ತು ಬಿಜೆಪಿ ಹೈಕಮಾಂಡ್ ವಿಧಿ ಇಲ್ಲದೆ ವಿಜಯೇಂದ್ರನನ್ನ ಅಧ್ಯಕ್ಷನನ್ನಾಗಿ ಮಾಡಿದೆ ಎಂದರು.

ದೇವರಾಜು ಟರ್ಮಿನಲ್ ಯೋಜನೆಯಲ್ಲಿ 47 ಕೋಟಿ ಹಗರಣ ನಡೆದಿದ್ದು, ಹಗರಣದಲ್ಲಿ ಅವ್ರದ್ದೆ ಚೇರ್ಮನ್ ಸಿಕ್ಕಾಕೊಂಡಿದ್ದಾರೆ. ಮೈಸೂರು ಸ್ಯಾಂಡಲ್ ಹಗರಣದಲ್ಲಿ ರಾಜಿನಾಮೆ ಪಡೆದುಕೊಂಡ್ರು. ಈ ರೀತಿ ಹಗರಣ ಮಾಡಿದವರಿಗೆ ವರ್ಗಾವಣೆ ಬಗ್ಗೆ ಮಾತನಾಡುವ ಹಕ್ಕಿಲ್ಲ  ಎಂದು ತಿರುಗೇಟು ನೀಡಿದರು.

ನಾಳೆ ವಿಶ್ವಕಪ್ ಫೈನಲ್ : ಭಾರತಕ್ಕೆ ಶುಭ ಹಾರೈಕೆ

ನಾಳೆ ಭಾರತ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಸೆಣಸಾಟ ಹಿನ್ನಲೆ ಭಾರತ ತಂಡಕ್ಕೆ ಶುಭಕೋರಿ ಭಾರತ ವಿಶ್ವಕಪ್ ಗೆಲ್ಲಿಲಿ ಎಂದು ಕೃಷಿ ಸಚಿವ ಹಾರೈಸಿದ್ದಾರೆ.

ನಮ್ಮ ಭಾರತ ತಂಡ 10 ಪಂದ್ಯ ಜಯಸಿ ಅಜೇಯವಾಗಿ ಫೈನಲ್ ಪ್ರವೇಶ ಮಾಡಿದೆ. ನಮ್ಮ ದೇಶದ ಶತಕೋಟಿ ಭಾರತೀಯ ಪರವಾಗಿ ಶುಭಕೋರುತ್ತೇನೆ. ಭಾರತ ವಿಶ್ವಕಪ್ ಗೆದ್ದು ಭಾರತ ದೇಶದ ಕೀರ್ತಿ ವಿಶ್ವಕ್ಕೆ ಪಸರಿಸುವಂತೆ ಮಾಡಲಿ. ನಾನು ನಾಳೆ ಬಿಡುವು ಮಾಡಿಕೊಂಡು ನಮ್ಮವರ ಆಟವನ್ನು ನೋಡಲು ಪ್ರಯತ್ನಿಸುವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular