ಹನೂರು: ಪಟ್ಟಣದ ಆರ್.ಎಸ್ ದೂಡ್ಡಿಯ ರಾಜುಗೆ ಹೆಜ್ಜೆನು ದಾಳಿಗೆ ಒಳಗಾಗಿ ಪಾರಾದ ವ್ಯಕ್ತಿಯಾಗಿದ್ದಾನೆ . ಇಂದು ಭಾನುವಾರದಂದು ಹನೂರು ಪಟ್ಟಣದ ತಹೀಸಿಲ್ದಾರ್ ಕಚೇರಿಯ ಸಮೀಪ ನೀರಿನ ಓವರ್ ಹೆಡ್ ಟ್ಯಾಂಕ್ ಮೇಲ್ಬಾಗದಲ್ಲಿ ಕಟ್ಡಿರುವ ಹೆಜ್ಜೇನುಗಳು ಹಠಾತ್ ದಾಳಿ ನೆಡೆಸಿದ್ದ ಇದರ ಪರಿಣಾಮ ಸಂಚರಿಸುತ್ತಿದ್ದ ಕೆಲ ಬೈಕ್ ಸವಾರರು ಸೇರಿದಂತೆ ಹಾಸ್ಟಲ್ ವಿದ್ಯಾರ್ಥಿಗಳ ಮೇಲೆಯೂ ದಾಳಿ ನೆಡೆಸಿದೆ.
ಈ ವೇಳೆ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾದರೆ ಆರ್.ಎಸ್ ದೊಡ್ಡಿಯ ರಾಜು ಎಂಬಾತನಿಗೆ ಹೆಜ್ಜೇನು ತೀರ್ವವಾಗಿ ಧಾಳಿ ನೆಡೆಸಿದ್ದು ಆತ ಜೇನುಹುಳುಗಳಿಂದ ರಕ್ಷಿಸಿಕೊಳ್ಳಲು ಧರಿಸಿದ್ದ ಬಟ್ಟೆಯನ್ನೇ ಆಶ್ರಯ ಪಡೆದು ಸಮೀಪದ ಜಮೀನೊಂದರ ಭಾವಿಗೆ ಹಾರಿ ಜೇನುಹುಳುಗಳಿಂದ ಸ್ವಯಂ ರಕ್ಷಣೆ ಒಳಗಾದ ಅಘಾತಕಾರಿ ಘಟನೆ ನೆಡೆಯಿತು. ಕೂಡಲೆ ಸ್ಥಳೀಯರ ಸಹಾಯದಿಂದ ಆತನನ್ನ
ಹನೂರು ಪಟ್ಟಣದ ಖಾಸಗಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಈ ಘಟನೆ ತಹೀಸಿಲ್ದಾರ್ ಗುರುಪ್ರಸಾದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಾರ್ವಜನಿಕರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹಠಾತ್ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಹೆಜ್ಜೇನು ತೆರವಿಗೆ ಕ್ರಮವಹಿಸುತ್ತೇನೆ ಎಂದು ತಿಳಿಸಿದರು.
