ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಜೆ ಗ್ರಾಮದ ಕುಂಡಡ್ಕ ಬಳಿಯ ವಿದ್ಯಾರ್ಥಿಯೋರ್ವ ಎರಡು ದಿನಗಳ ಹಿಂದೆ ತಲಪಾಡಿಯಲ್ಲಿ ನಾಪತ್ತೆಯಾಗಿದ್ದ. ಇದೀಗ ಈ ಬಾಲಕ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಮೂಲತ: ಪೆರುವಾಜೆ ಗ್ರಾಮದ ಕುಂಡಡ್ಕ ಹನೀಫ್ ಎಂಬವರ ಪುತ್ರ ಅಬೀಲ್ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ೮ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಬೆಳಿಗ್ಗೆ ಶಾಲೆಗೆ ಹೋಗಿ ಮತ್ತೆ ತಿರುಗಿ ಸಂಜೆ ಮಸೀದಿಗೆ ಬಂದಿದ್ದು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಅಬೀಲ್ ಮತ್ತೆ ಹಿಂದಿರುಗಿ ಬಂದಿರಲಿಲ್ಲ. ಈ ಬಗ್ಗೆ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶನಿವಾರ ರಾತ್ರಿ ಮೈಸೂರಿನಲ್ಲಿ ಈತ ಪೊಲೀಸರಿಗೆ ಪತ್ತೆಯಾಗಿದ್ದು ಬಳಿಕ ಪೊಲೀಸರು ಫೋನ್ ಮುಖಾಂತರ ಮನೆಯವರಿಗೆ ತಿಳಿಸಿದ್ದು ಮನೆಯವರು ರಾತ್ರಿ ಮೈಸೂರಿಗೆ ಹೋಗಿ ಇಂದು ಬೆಳಿಗ್ಗೆವಿದ್ಯಾರ್ಥಿಯನ್ನು ಕುಂಡಡ್ಕ ಮನೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದು ಬಂದಿದೆ.