Sunday, April 20, 2025
Google search engine

Homeಅಪರಾಧಗನಗನಸಖಿಯೊಂದಿಗೆ ಅಸಭ್ಯ ವರ್ತನೆ: ಪ್ರಯಾಣಿಕನ ಬಂಧನ

ಗನಗನಸಖಿಯೊಂದಿಗೆ ಅಸಭ್ಯ ವರ್ತನೆ: ಪ್ರಯಾಣಿಕನ ಬಂಧನ

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಗಗನಸಖಿಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ ಆರೋಪದಡಿ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ರಣಧೀರ್‌ ಸಿಂಗ್‌ (33) ಬಂಧಿತ.

ಈತ ನ.17ರಂದು ಸಂಜೆ 6.40ಕ್ಕೆ ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗಗನಸಖಿಯೊಬ್ಬರ ಕೈ ಹಿಡಿದು ಮೂರು ಬಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಅದರಿಂದ ಮುಜುಗರಕ್ಕೊಳಗಾದ ಗಗನಸಖಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ತನ್ನ ಸೀಟ್‌ ನಲ್ಲಿಯೇ ಮದ್ಯ ಸೇವಿಸಿ ನಿಂದಿಸಲು ಆರಂಭಿಸಿದ್ದಾನೆ. ಈ ಸಂಬಂಧ ಸೆಕ್ಯೂರಿಟಿ ಮ್ಯಾನೇಜರ್‌ ವರುಣ್‌ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದರು.

RELATED ARTICLES
- Advertisment -
Google search engine

Most Popular