ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ಗೆ ತನಗೆ ಆಹ್ವಾನ ನೀಡಲಿಲ್ಲ ಎಂದು ಭಾರತ ಕ್ರಿಕೆಟ್ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಕಪಿಲ್ ದೇವ್ ಅವರ ನೇತೃತ್ವದಲ್ಲಿ ಭಾರತ ತಂಡ ೧೯೮೩ರಲ್ಲಿ ವಿಶ್ವ ಕಪ್ ಗೆದ್ದಿತ್ತು. ತಾನು ತನ್ನ ಹಿಂದಿನ ತಂಡದ ಸದಸ್ಯರೊಂದಿಗೆ ಪಂದ್ಯಕ್ಕೆ ಹೋಗಲು ಬಯಸಿದ್ದೆ ಆದರೆ ವಿಶ್ವಕಪ್ ಫೈನಲ್‌ಗೆ ತನಗೆ ಆಹ್ವಾನ ನೀಡಲಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನನ್ನನ್ನು ಅಲ್ಲಿಗೆ ಆಹ್ವಾನಿಸಿಲ್ಲ. ಅವರು ನನ್ನನ್ನು ಕರೆಯಲಿಲ್ಲ ಹಾಗಾಗಿ ನಾನು ಹೋಗಲಿಲ್ಲ. ಇದು ತುಂಬಾ ದೊಡ್ಡ ಕಾರ್ಯಕ್ರಮವಾಗಿದೆ ಮತ್ತು ಅವರು ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬಹಳ ನಿರತರಾಗಿದ್ದಾರೆ. ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.