Saturday, April 19, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿ: ಸಮಸ್ಯಾತ್ಮಕ ಮೆಣಸಿನಕಾಯಿ ಬೆಳೆಗಳ ತಾಕುಗಳಿಗೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ

ಬಳ್ಳಾರಿ: ಸಮಸ್ಯಾತ್ಮಕ ಮೆಣಸಿನಕಾಯಿ ಬೆಳೆಗಳ ತಾಕುಗಳಿಗೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ವ್ಯಾಪ್ತಿಯ ಬೊಬ್ಬುಕುಂಟಾ, ಎತ್ತಿನ ಬೂದಿಹಾಳು ಹಾಗೂ ಶಂಕರಬಂಡೆ ಗ್ರಾಮಗಳಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರತ್ನಪ್ರಿಯಾ ಆರ್.ಯರಗಲ್ಲ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗಶಾಸ್ತ್ರ ವಿಜ್ಞಾನಿ ಡಾ.ಗೋವಿಂದಪ್ಪ. ಎಂ.ಆರ್., ಕೀಟಶಾಸ್ತ್ರ ವಿಜ್ಞಾನಿಗಳಾದ ಡಾ.ಹನುಮಂತಪ್ಪ, ಶ್ರೀಹರಿ ಅವರ ತಂಡವು ಇತ್ತೀಚೆಗೆ ಸಮಸ್ಯಾತ್ಮಕ ಮೆಣಸಿನಕಾಯಿ ಬೆಳೆಗಳಿಗೆ ಕ್ಷೇತ್ರ ಭೇಟಿ ನಡೆಸಿ ಬೆಳೆ ಪರಿಶೀಲಿಸಿದರು.

ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಗಿಡಗಳಿಗೆ/ಬೆಳೆಗಳಿಗೆ ಕಪ್ಪು ಥ್ರಿಪ್ಸ್ ನುಸಿ, ಮುಟುರು ಹಾಗೂ ಎಲೆಮುಟುರು ನಂಜಾಣು ರೋಗಕ್ಕೆ ತುತ್ತಾಗಿರುವುದು ಕಂಡುಬಂದಿದ್ದನ್ನು ತಂಡದ ಅಧಿಕಾರಿಗಳು ಗಮನಿಸಿದರು.
ಮೆಣಸಿನಕಾಯಿ ಬೆಳೆಯು ಸುಮಾರು ಎರಡುವರೆ ತಿಂಗಳಿನಿಂದ ಮೂರುವರೆ ತಿಂಗಳಿನ ಅವಧಿಯದ್ದಾಗಿದ್ದು ಕಾಯಿ ಬಲಿಯವ ಹಂತದಲ್ಲಿದೆ. ಬೆಳೆ ನಿರ್ವಹಣೆಗಾಗಿ ವಿವಿಧ ತೆರನಾದ ಕೀಟನಾಶಕ ಹಾಗೂ ರೋಗನಾಶಕಗಳನ್ನು ಮಿಶ್ರಣ ಮಾಡಿ, ನಾಲ್ಕರಿಂದ ಐದು ದಿನಕೂಮ್ಮೆ ಸಿಂಪರಣೆ ಮಾಡತ್ತಿದ್ದೇವೆ, ಅಲ್ಲದೇ ಸಿಂಪರಣಾ ಖರ್ಚು ಅಧಿಕವಾಗುತ್ತಿದೆ? ಎಂದು ರೈತರು ಅಧಿಕಾರಿಗಳ ಗಮನಕ್ಕೆ ತಂದರು.

ಅಂಟು ಬಲೆಗಳನ್ನು ಎಕರೆಗೆ ೨೦-೨೫ ರಂತೆ ಅಳವಡಿಸಬೇಕು, ಸುತ್ತಲೂ ಬಲೆ ಬೆಳೆಗಳಾಗಿ ತೊಗರಿ, ಸಜ್ಜೆ, ಬೆಳೆಯಬೇಕು, ಸಮಸ್ಯೆ ಕಾಣಿಸಿಕೊಂಡಾಗ ಜೈವಿಕ ಕೀಟ ನಾಶಕಗಳಾದ ಬಿವೇರಿಯ ಬೆಸ್ಸಿಯಾನ ಲೆಕ್ಯಾನಿಸಿಲಿಯಾ ಲೇಕಾನಿ ಅಥವಾ ಮೆಟಾರೈಜಿಯಂ ಅನಿಸೋಪ್ಲಿಯಾ ಬಳಸಬೇಕು. ರಾಸಾಯನಿಕ ಕೀಟನಾಶಕಗಳಾದ ಪಿಪೊರೀನಿಲ್ ೧ ಮಿ.ಲೀ ಅಥವಾ ಡೈಯಾಫೆಂಥಿಯುರಾನ್ ೧ ಗ್ರಾಂ ಅಥವಾ ಪ್ಲುಕ್ಸಮೆಟಾ ಮೈಡ್ ೦.೫೨ ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಜೊತೆಗೆ ಆಗಿಂದ್ದಾಗೆ ಎಡೆ ಹೊಡೆಯುವುದು, ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಬೇಕು ಅಧಿಕಾರಿಗಳ ತಂಡವು ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ರೈತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular