Monday, April 21, 2025
Google search engine

Homeರಾಜ್ಯಸುದ್ದಿಜಾಲಬದ್ಧತೆ ಪ್ರೀತಿ, ವಿಶ್ವಾಸಗಳ ಸೆಲೆಯಾಗಿ ನಿಂತಿರುವ ಆಶ್ರಮ: ಸುತ್ತೂರು ಶ್ರೀಗಳು

ಬದ್ಧತೆ ಪ್ರೀತಿ, ವಿಶ್ವಾಸಗಳ ಸೆಲೆಯಾಗಿ ನಿಂತಿರುವ ಆಶ್ರಮ: ಸುತ್ತೂರು ಶ್ರೀಗಳು

ನವದೆಹಲಿ: ಅಚಲವಾದ ಬದ್ಧತೆ ಮತ್ತು ಪ್ರೀತಿ, ವಿಶ್ವಾಸಗಳ ಹಂಚಿಕೆಯೊಂದಿಗೆ ಆಧ್ಯಾತ್ಮಿಕ ಸೆಲೆಯಾಗಿ ಶಾಂತಿಗಿರಿ ಆಶ್ರಮ ನಿಂತಿದೆ ಎಂದು ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ವರು ನವದೆಹಲಿಯ ಸಾಕೇತ್‌ನಲ್ಲಿ ಶಾಂತಿಗಿರಿ ಆಶ್ರಮದ ರಜತ ಮಹೋತ್ಸವ ಮತ್ತು ಹೊಸ ಸಂಕೀರ್ಣದ ಉದ್ಘಾಟನಾಕಾಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ತಿಳಿಸಿದರು. ಇಪ್ಪತ್ತೈದು ವರ್ಷಗಳ ಹಿಂದೆ ನೆಟ್ಟ ಆಧ್ಯಾತ್ಮಿಕ ಆಕಾಂಕ್ಷೆಯ ಬೀಜಹೆಮ್ಮರವಾಗಿ ಬೆಳದುಅನೇಕರ ಬಾಳಿಗೆ ನೆರಳಾಗಿದೆ. ಈ ಬೆಳ್ಳಿಹಬ್ಬ ಕೇವಲ ಒಂದು ಮೈಲಿಗಲ್ಲಲ್ಲ. ಶ್ರೀ ನವಜ್ಯೋತಿಕರುಣಾಕರ ಗುರುಗಳು ಸನಾತನಧರ್ಮದ ಇತಿಹಾಸದಲ್ಲಿ ಹೊಸ ಮಾರ್ಗವನ್ನು ರೂಪಿಸಿದರು. ಅವರ ‘ಮಾತು ಸತ್ಯ, ಸತ್ಯವೇಗುರು, ಗುರುವೇದೇವರು’ ಎನ್ನು ವತತ್ತ್ವದ ಆಧಾರದ ಮೇಲೆ ಶಾಂತಿಗಿರಿ ಆಶ್ರಮ ಆರಂಭವಾಯಿತು.

ಈ ಆಶ್ರಮವು ಜಿಜ್ಞಾಸುಗಳಿಗೆ ಪವಿತ್ರ ಸ್ಥಳವಾಗಿದೆ,ಆಶ್ರಯ ಸ್ಥಾನವಾಗಿದೆ ಮತ್ತುಅಸಂಖ್ಯಾತ ಜೀವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.ಲೌಕಿಕ ಪ್ರಪಂಚದಗಡಿಬಿಡಿಯಲ್ಲಿಜೀವನ ಸಾಗಿಸುತ್ತಿರುವವರಿಗೆ ಶಾಂತಿಗಿರಿಆಶ್ರಮವು ಪ್ರಶಾಂತತೆಯ ನೆಲೆಯಾಗಿ ನಿಂತಿದೆ. ಜೀವನದಲ್ಲಿ ನೊಂದ ಅನೇಕರು ಇಲ್ಲಿ ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಆತ್ಮೀಯರೊಂದಿಗೆ ಜೀವಮಾನದ ಬಂಧಗಳನ್ನು ಬೆಸೆಯುತ್ತಿದೆ.

ಇಲ್ಲಿಯ ಸಹಾನುಭೂತಿ, ತಿಳುವಳಿಕೆಯ ಮನೋಭಾವ ಮತ್ತು ನಿಸ್ವಾರ್ಥ ಸೇವಾ ಮನೋಭಾವಗಳು ಸುದೀರ್ಘ ಪ್ರಯಾಣಕ್ಕೆಉತ್ತೇಜನ ನೀಡಿವೆ.ಸಂಸ್ಥಾಪಕರಾದ ಶ್ರೀ ನವಜ್ಯೋತಿಕರುಣಾಕರಗುರುಗಳು ಹಾಗೂ ಸ್ವಯಂಸೇವಕರಅವಿರತ ಪ್ರಯತ್ನ ಫಲ ನೀಡಿದೆ.ಅವರ ಬೋಧನೆಯ ಆಳವಾದ ಪ್ರಭಾವವು ಸಾರ್ವಕಾಲಿಕವಾಗಿ ಪ್ರತಿಧ್ವನಿಸುತ್ತಿದೆ.ಆಶ್ರಮವು ಸದುದ್ದೇಶಗಳೊಂದಿಗೆ ಪ್ರೀತಿ, ಸಹಾನುಭೂತಿ ಮತ್ತು ಸಾವಧಾನತೆಯ ಸಂದೇಶವನ್ನು ಹರಡುತ್ತಿದೆ.ಏಕತೆ, ಅರಿವು ಮತ್ತುಆಧ್ಯಾತ್ಮಿಕಬೆಳವಣಿಗೆಯ ಸಾಮರಸ್ಯದ ಅಸ್ತಿತ್ವವನ್ನು ನೆನಪಿಸುತ್ತದೆ.ಮೌಲ್ಯಗಳ ಪ್ರತಿಬಿಂಬವಾಗಿದೆ.ನೂತನವಾಗಿ ಸಮರ್ಪಣೆಯಾಗುತ್ತಿರುವ ಹೊಸ ಸಂಕೀರ್ಣವು ಆಶ್ರಮದ ವ್ಯಾಪ್ತಿಯನ್ನು ಗಮನಾರ್ಹ ರೀತಿಯಲ್ಲಿ ಹೆಚ್ಚಸಲಿದೆ.

ಶಾಂತಿಗಿರಿ ಆಶ್ರಮದ ಆಧ್ಯಾತ್ಮಿಕ ಸೆಳವು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸಲಿ ಎಂದು ಹೇಳಿದರು. ಕಾರ್ಯದರ್ಶಿಗಳಾದ ಸ್ವಾಮಿಗುರುರತ್ನಜ್ಞಾನ ತಪಸ್ವಿ, ಪಾಲ್ಗಾಟ್‌ ಆಶ್ರಮದ ಸ್ವಾಮಿ ಸ್ನೇಹಾತ್ಮ, ಸಾಕೇತ್‌ ಆಶ್ರಮದ ಸ್ವಾಮಿ ಭಕ್ತರತ್ನ, ಜನನಿ ಜ್ಞಾನ ತಪಸ್ವಿನಿ ಹಾಗೂ ಆಶ್ರಮದ ಇತರ ಎಲ್ಲ ಸನ್ಯಾಸಿಗಳು ಉಪಸ್ಥಿತರಿದ್ದರು. ಡಾ. ಕಿರಣ್‌ರವರು ಸ್ವಾಗತಿಸಿ, ಪರಿಚಯಿಸಿದರು ಮೇಘಮಧು ವಂದನೆ ಸಲ್ಲಿಸಿದರು.ಶ್ರೀ ಪ್ರಶಾಂತ್‌ರವರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular