ಹಾಸನ : ಗೂಡ್ಸ್ ವಾಹನ ಒಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಾಯಿ ಮಗ ಸಾವನ್ನಪ್ಪಿರುವ ಘಟನೆ ಇಂದು ಹಾಸನದ ಬಿ. ಕಾಟಿಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ತಾಯಿ ಕಮಲಮ್ಮ(೭೦) ಹಾಗೂ ಮಗ ಸತೀಶ್ (೪೦) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸಾವನಪ್ಪಿದ್ದಾರೆ ಹಾಸನದ ಬಿ ಕಾಟಿಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರು, ಇಲ್ಲಿವರೆಗೂ ಯಾವುದೇ ರೀತಿಯಾದಂತಹ ಕ್ರಮ ತೆಗೆದುಕೊಂಡಿಲ್ಲ.
ಇದರಿಂದ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಎಷ್ಟೇ ದೂರು ನೋಡಿದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ರಸ್ತೆಯ ಎಡಕ್ಕೆ ಹಾಗೂ ಬಲಕ್ಕೆ ಪಾರ್ಕಿಂಗ್ ಇರುವುದರಿಂದ ಈ ರೀತಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲಿ ಯಾವುದೇ ರೀತಿಯಾಗಿ ಸಿಮೆಂಟ್ ಲಾರಿಗಳನ್ನು ನಿಲ್ಲಿಸಬಾರದು. ಈ ಕುರಿತಂತೆ ಪೊಲೀಸರಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರೂ ಆಕ್ರೋಶ ಹೊರಹಕಿದ್ದಾರೆ.