ಮಂಡ್ಯ: ಶ್ರೀರಂಗಪಟ್ಟಣದ ಗಂಜಾಮ್’ನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿದ್ದು, ಮಗಳ ಮದುವೆಯ ಹಿನ್ನಲೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಿಯ ಶ್ರೀಚಕ್ರದಲ್ಲಿ ಮದುವೆ ಮಗಳ ಆಹ್ವಾನ ಪತ್ರಿಕೆ ಇಟ್ಟು ವಿಶೇಷ ಪೂಜೆ ನೆರೆವೇರಿಸಿದ್ದಾರೆ.

ಪೂಜೆ ಬಳಿಕ ಸ್ಥಳೀಯ ಮುಖಂಡರಿಗೆ ಮದುವೆ ಅಹ್ವಾನ ಪತ್ರಿಕೆ ನೀಡಿ ಮದುವೆಗೆ ಬರುವಂತೆ ಆಹ್ವಾನಿಸಿದ್ದಾರೆ.
ಮಾಜಿ ಸಚಿವ ಶ್ರೀರಾಮಲುಗೆ ಸ್ಥಳೀಯ ಬಿಜೆಪಿ ಮುಖಂಡರಾದ ಸಚ್ಚಿದಾನಂದ, ನಂಜುಂಡೇಗೌಡ ಸಾಥ್ ನೀಡಿದ್ದಾರೆ.