ರಾಮನಗರ: ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವೃದ್ದಿಗೆ ಸಹಕಾರಿಯಾಗಿವೆ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಸರ್ವಾಂಗಿಣವಾಗಿತಮ್ಮ ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳುವಂತೆ ರಾಮನಗರ ವಿಧಾನ ಸಭಾಕ್ಷೇತ್ರದ ಶಾಸಕರಾದಇಕ್ಬಾಲ್ ಹುಸೇನ್‌ಅವರುಕರೆ ನೀಡಿದರು. ಅವರುನ.೨೧ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ರಾಮನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ವತಿಯಿಂದ ರಾಮನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಮನಗರಜಿಲ್ಲಾ ಮಟ್ಟದಯುವಜನೋತ್ಸವ ೨೦೨೩-೨೪ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.
ಯೋಗ, ಧ್ಯಾನ ಮತ್ತುಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲೀ ಶಿಕ್ಷಣದಲ್ಲೂ ಪ್ರಗತಿ ಸಾಧಿಸಬಹುದು, ವಿದ್ಯಾರ್ಥಿಗಳು ಸಮರ್ಥವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿಉನ್ನತ ಸ್ಥಾನಮಾನ, ಗೌರವದೊರೆಯುತ್ತದೆ, ಉತ್ತಮ ಭವಿಷ್ಯ ನಿಮ್ಮಕೈಯಲ್ಲಿಯೇಇದೆ, ಅದನ್ನುಅರಿತು ಒಳ್ಳೆಯ ಹೆಜ್ಜೆಯನ್ನುಇಟ್ಟುತಂದೆತಾಯಿ ಹಾಗೂ ಗುರುಗಳಿಗೆ ಗೌರವತಂದುಕೊಡಬೇಕು, ಯುವಜನೋತ್ಸವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಅವರುತಿಳಿಸಿದರು.
ಮಹಿಳಾ ಪ್ರಥಮದರ್ಜೆಕಾಲೇಜಿಗೆಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾ ಪರಿಕರಗಳು, ಸಮವಸ್ತ್ರ, ಕಬ್ಬಡಿ ಮತ್ತುಕುಸ್ತಿಮ್ಯಾಟ್, ಬ್ಯಾಡ್ಮಿಂಟನ್-ವಾಲಿಬಾಲ್‌ಕೋರ್ಟ್ ಹಾಗೂ ಈ ಕಾಲೇಜಿನಮುಂದೆಕೋರಿಕೆಯ ಬಸ್ ನಿಲುಗಡೆಯನ್ನು ಶೀಘ್ರವಾಗಿ ನೆರವೇರಿಸಲಾಗುವುದುಎಂದವರು ಹೇಳಿದರು.
ರಾಮನಗರನಗರ ಸಭೆ ಅಧ್ಯಕ್ಷ ವಿಜಯಕುಮಾರಿ, ಉಪಾಧ್ಯಕ್ಷರಾದ ಸೋಮಶೇಖರ್ (ಮಣಿ), ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸತೀಶ್ ಸೇರಿದಂತೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.