Sunday, April 20, 2025
Google search engine

Homeರಾಜ್ಯಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ ಸನ್ನಿಹಿತ: ಸ್ಥಳದಲ್ಲಿ ೨೦ ಆಂಬ್ಯುಲೆನ್ಸ್

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ ಸನ್ನಿಹಿತ: ಸ್ಥಳದಲ್ಲಿ ೨೦ ಆಂಬ್ಯುಲೆನ್ಸ್

ಡೆಹ್ರಾಡೂನ್: ಕುಸಿದ ನಿರ್ಮಾಣ ಹಂತದ ಸುರಂಗದಿಳಗೆ ಹನ್ನೊಂದು ದಿನಗಳಿಂದ ಪರಿತಪಿಸುತ್ತಿರುವ ೪೧ ಮಂದಿ ಕಾರ್ಮಿಕರ ರಕ್ಷಣೆ ಸನ್ನಿಹಿತವಾಗಿದೆ. ನಿರಂತರವಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಹೊರಗೆ ಕರೆತಂದ ತಕ್ಷಣ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸುವ ೨೦ ಆಂಬ್ಯುಲೆನ್ಸ್ ಗಳು ಸ್ಥಳದಲ್ಲಿ ಇರಿಸಲಾಗಿದೆ.

ಕಾರ್ಮಿಕರು ಜೀವಂತವಾಗಿದ್ದಾರೆ ಮತ್ತು ಸುರಂಗವನ್ನು ತೆರವುಗೊಳಿಸಿ ಕಾರ್ಮಿಕರನ್ನು ಕಾಪಾಡಲು ಇನ್ನೂ ೧೨ ಮೀಟರ್ ಗಳಷ್ಟೇ ಬಾಕಿ ಇದೆ. ಕಾರ್ಮಿಕರನ್ನು ಹೊರಗೆ ಕರೆತರು ಬೆಡ್ ಗಳನ್ನು ರೆಡಿ ಮಾಡಿಕೊಂಡಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಘಟನಾ ಸ್ಥಳವನ್ನು ತಲುಪಲಿದ್ದಾರೆ. ೪೧ ಕಾರ್ಮಿಕರಲ್ಲಿ ಜಾರ್ಖಂಡ್ ರಾಜ್ಯಕ್ಕೆ ಸೇರಿದ ೧೫ ಕಾರ್ಮಿಕರು ವೈದ್ಯಕೀಯವಾಗಿ ಫಿಟ್ ಆಗಿದ್ದಾರೆ ಎಂದು ಸರ್ಕಾರ ಘೋಷಿಸಿದ್ದು, ಅವರನ್ನು ವಿಮಾನದಲ್ಲಿ ತವರಿಗೆ ಕರೆತರಲು ಸಕಲ ತಯಾರಿ ಮಾಡಿಕೊಂಡಿದೆ. ಕಾರ್ಮಿಕರನ್ನು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್?ನಿಂದ ರಾಂಚಿಗೆ ಏರ್‌ಲಿಫ್ಟ್ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular