Monday, April 21, 2025
Google search engine

Homeಸ್ಥಳೀಯಉಗುಳಬಾರದು ರಸ್ತೆಯಲ್ಲಿ ಜಾಗೃತಿ ಕಾರ್ಯಕ್ರಮ

ಉಗುಳಬಾರದು ರಸ್ತೆಯಲ್ಲಿ ಜಾಗೃತಿ ಕಾರ್ಯಕ್ರಮ

ಮೈಸೂರು: ನಗರದ ಅನಂತಗೀತ ವಿದ್ಯಾಲಯದಲ್ಲಿ ಸಾರೇ ಜಹಾಂಸೇ ಅಚ್ಚಾ ಫೌಂಡೇಷನ್ ಸಹಯೋಗದಲ್ಲಿ ಜನರು ರಸ್ತೆಯಲ್ಲಿ ಹಾಗೂ ಕಂಡಕಂಡಲ್ಲಿ ಉಗುಳುವುದರಿಂದಾಗುವ ಕೆಟ್ಟ ಪರಿಣಾಮಗಳನ್ನು ಕುರಿತು ಸಾರೆ ಜಹಾಂಸೇ ಅಚ್ಚಾ ಫೌಂಡೇಶನ್ನ ಸಂಸ್ಥಾಪಕ ರಾಜು ಮತ್ತು ಪ್ರೀತಿ ರವರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಇವರು ಮಹಾರಾಷ್ಟ್ರದ ಪುಣೆಯಿಂದ ಹೊರಟು ಭಾರತದ ೨೬ ರಾಜ್ಯಗಳು ಮತ್ತು ೬ ಕೇಂದ್ರಾಡಳಿತ ಪ್ರದೇಶಗಳನ್ನು ತಮ್ಮದೇ ಸ್ವಂತ ಕಾರಿನಲ್ಲಿ ಸುಮಾರು ೫೨೦೦೦ ಕಿ ಮೀಟರ್ ಪ್ರವಾಸ ಮಾಡಿ ದೇಶಾದ್ಯಂತ ಜನರಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಅನಂತಗೀತ ವಿದ್ಯಾಲಯದ ನಿದೇ೯ಶಕರಾದ ಶ್ರೀಮತಿ ಮಂಜುಳಾ ರವರು ಅಭಿನಂದಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ್ ಅಮರನಾಥ್ ಉಪ ಪ್ರಾಂಶುಪಾಲ ಹರದೂರುಲೋಕೇಶ್ ವಿಜ್ಞಾನ ಸಂಯೋಜಕ ಶಿಕ್ಷಕ ಉಷಾ, ಶಿಲ್ಪಾ, ಜಮುನಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular