Monday, April 21, 2025
Google search engine

Homeರಾಜಕೀಯಬಾಗಲಕೋಟೆ: ಹಲವು ಜನಸಮುದಾಯಗಳ ಸಮಾವೇಶ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಹಲವು ಜನಸಮುದಾಯಗಳ ಸಮಾವೇಶ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋವಿ ಜನಾಂಗದ ಕಸುಬಾದ ಕಲ್ಲು ಒಡೆಯುವ ಮೂಲಕ ಗುರು ಕುಟೀರವನ್ನು ಉದ್ಘಾಟಿಸಿ, ಶಿಲಾಮಂಟಪದ ಶಿಲಾನ್ಯಾಸ ನೆರವೇರಿಸಿದರು.

ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವದ ಅಂಗವಾದಿ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ  ಬೃಹತ್ ಭೋವಿ, ಕೊರಚ, ಕೊರಮ ಸೇರಿದಂತೆ ಹಲವು ಜನಸಮುದಾಯಗಳ ಸಮಾವೇಶದಲ್ಲಿ ಸಾಂಕೇತಿಕವಾಗಿ ಸುತ್ತಿಗೆ ಹಿಡಿದು ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿದರು.

ಭೋವಿ ಗುರುಪೀಠದ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋವಿ ಸೇರಿದಂತೆ ಮುಂತಾದ ಸಮುದಾಯಗಳಿಗೆ ನೀಡಿರುವ ಅಪಾರ ಕೊಡಿಗೆಗಳನ್ನು ಪಟ್ಟಿ ಮಾಡಿ ಇಡಿ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸಿದರು.

ಶಾಸಕರಾದ ಮಾನಪ್ಪ ವಜ್ಜಲ್ ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರುಗಳು ಮತ್ತು ಭೋವಿ , ಕೊರಮ, ಕೊರಚ ಸಮುದಾಯಗಳ ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಗುರು ಕುಟೀರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಠದಲ್ಲೇ ಪ್ರಸಾದ ಸೇವಿಸಿ ವೇದಿಕೆಗೆ ಆಗಮಿಸಿ ಬೃಹತ್ ಕಾರ್ಯಕ್ರಮ ಉದ್ಘಾಟಿಸಿದರು.

RELATED ARTICLES
- Advertisment -
Google search engine

Most Popular