Sunday, April 20, 2025
Google search engine

Homeರಾಜ್ಯಮಂಡ್ಯ: ಬಸವೇಶ್ವರ ದೇವಸ್ಥಾನದ ನೂತನ ಬಸವ ರಥ ಲೋಕಾರ್ಪಣೆ

ಮಂಡ್ಯ: ಬಸವೇಶ್ವರ ದೇವಸ್ಥಾನದ ನೂತನ ಬಸವ ರಥ ಲೋಕಾರ್ಪಣೆ

ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಡಕಲಪುರ ನಡಕಲಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ನೂತನ ಬಸವ ರಥವನ್ನು ಲೋಕಾರ್ಪಣೆ ಮಾಡಲಾಯಿತು.

ಬಸವೇಶ್ವರ ಬಸವರಥಕ್ಕೆ ಭಕ್ತರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಬಸವೇಶ್ವರ ದೇವಸ್ಥಾನ ಪುರಾತನ ಕಾಲದ್ದಾಗಿದ್ದು, ಸುಮಾರು 25 ಲಕ್ಷ ವೆಚ್ಚದ ಬಸವರಥವನ್ನು ಲೋಕಾರ್ಪಣೆ ಮಾಡಲಾಯಿತು.

ಬಳಿಕ ತಮಟೆ ನಗಾರಿಗಳೊಂದಿಗೆ ಬಸವ ದೇವರನ್ನು ರಥದಲ್ಲಿ ಪ್ರತಿಷ್ಟಾಪಿಸಲಾಯಿತು.

ಇದೇ ಸಂದರ್ಭದಲ್ಲಿ ಭಕ್ತಾದಿಗಳಿಗೆ ಪ್ರಸಾದ ನೀಡಲಾಯಿತು.

ಬಳಿಕ ದಾನಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಿರೀಶ್, ಬಸವರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular