ಹುಣಸೂರು: ಹುಣಸೂರಿನಲ್ಲಿ ಸಂಭ್ರಮ ಅಡ್ಸ್ ಅಂಡ್ ಇವೆಂಟ್ಸ್ ವತಿಯಿಂದ ವಿವಿಧ ವಾಣಿಜ್ಯ ಸಂಕೀರಣ ಕಟ್ಟಡ ನಿರ್ಮಾಣ ಕಾಮಗಾರಿಗೆ ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್ ಇಂದು ಶಂಕುಸ್ಥಾಪನೆ ನೆರವೇರಿಸಿದರು. ನಗರದ ಸ್ನೇಹಜೀವಿ ಬೈ ಪಾಸ್ ರಸ್ತೆಯ ಕಾಫಿ ವರ್ಕ್ ಸ್ಥಳದಲ್ಲಿ ಅಂದಾಜು ೩.೫ ಕೋಟಿ ರೂ ವೆಚ್ಚದಲ್ಲಿ ವಿವಿಧ ಕ್ರೀಡೆ ಹಾಗೂ ಮನರಂಜನೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಭೂಮಿ ಪೂಜೆ ವೇಳೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್ ಎನ್ ಪ್ರೇಮ್ ಕುಮಾರ್, ಹುಣಸೂರು ಸಾಯಿ ಬಾಬಾ ಮಂದಿರದ ಟ್ರಸ್ಟಿಗಳಾದ ರತ್ನ ಪ್ರೇಮ್ ಕುಮಾರ್, ಎಚ್ ಎನ್ ಶಶಿಧರ್, ಡಾ.ವೃಷಬೇಂದ್ರಸ್ವಾಮಿ,ಉದ್ಯಮಿ ಎಚ್ ಪಿ ಅಮರ್ ನಾಥ್ ರವರು ಡಾ.ಎಚ್ ಪಿ ಶ್ರೀನಾಥ್, ಉದ್ಯಮಿಗಳಾದ ಸೇತುವೆ ಆಶೋಕ್, ಬಿಳಿಕೆರೆ ಬಸವರಾಜ್, ಕಲ್ಕುಣಿಕೆ ರಮೇಶ್, ಆನಂದ್, ರಾಘು, ಚಿಕ್ಕಸ್ವಾಮಿ, ಝಕೀರ್ ಹುಸೇನ್, ಕೊಳಗಟ್ಟ ರವಿ, ಸಂತೋಷ್, ವೇಣು, ಮಂಜು, ಮಧು,ಗಣೇಶ್, ಕಾಫಿ ವರ್ಕ್ಸ ನ ವ್ಯವಸ್ಥಾಪಕ ನಾಣಯ್ಯ ಮತ್ತು ಸಿಬ್ಬಂದಿಗಳು ಇತರರು ಇದ್ದರು.