ಹುಣಸೂರು: ಒತ್ತಡ ನಿವಾರಿಸಲು ಪುಸ್ತಕಗಳನ್ನು ಓದುವುದೇ ದಾರಿ, ಇದರಿಂದ ಮನಸ್ಸಲ್ಲಿ ಸಂಕುಚಿತ ಭಾವನೆ ಕುಂದುವುದಲ್ಲದೇ ಉತ್ಸಾಹ ಹೆಚ್ಚಾಗುವುದೆಂದು ಮೈಸೂರಿನ ವಿವೇಕ ಫೌಂಡೇಶನ್‌ನ ಸೈಕ್ಯಾಟ್ರಿಸ್ಟ್ ಸುಹಾಸ್ ಭಾರ್ಗವ್ ಅಭಿಪ್ರಾಯಪಟ್ಟರು.
ನಗರದ ಡಿ.ದೇವರಾಜ ಅರಸು ಪದವಿ ಕಾಲೇಜಿನಲ್ಲಿ ಐಕ್ಯೂಎಸ್ಸಿ ಹಾಗೂ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಜಿಟಲ್ ಯುಗದಲ್ಲಿ ಒತ್ತಡವನ್ನು ನಿವಾರಿಸುವುದು ಹೇಗೆ ಎಂಬುದರ ಬಗ್ಗೆ ಉಪನ್ಯಾಸ ನೀಡಿದ ಅವರು ಡಿಜಿಟಲ್ ಯುಗದಲ್ಲಿ ಸ್ಪರ್ಧಾತ್ಮಕರಾಗಿ ಕರ್ತವ್ಯ ನಿರ್ವಹಿಸುವುದರಿಂದ ಮಾನಸಿಕ ಒತ್ತಡವು ಹೆಚ್ಚಾಗತೊಡಗಿದೆ ಇದನ್ನು ನಿಯಂತ್ರಿಸಲು ಪುಸ್ತಕ ಓದುವ, ಸಂಗೀತ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ ಇದರಿಂದ ಮಾನಸಿಕ ಓತ್ತಡ ನಿಯಂತ್ರಣಕ್ಕೆ ಬರಲಿದೆ ಎಂದರು.
ಈ ಕುರಿತು ಅಧ್ಯಾಪಕ ವೃಂದದವರು ವಿದ್ಯಾರ್ಥಿ ವೃಂದದವರು ತಮ್ಮ ತಮ್ಮ ಸಮಸ್ಯೆಗಳಿಗೆ ಪ್ರಶ್ನೆ ಕೇಳುವುದರ ಮೂಲಕ ಪರಿಹಾರವನ್ನು ಕಂಡುಕೊಂಢರು. ಕಾಲೇಜಿನ ಗ್ರಂಥಪಾಲಕ ಡಾ.ಜಗದೀಶ್.ಎಂ.ವಿ ಪ್ರಾಸ್ತವಿಕ ಮಾತುಗಳನ್ನಾಡಿ ಗ್ರಂಥಾಲಯ ಸಪ್ತಾಹ ಹಾಗೂ ಗ್ರಂಥಾಲಯದ ಉಪಯುಕ್ತತೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಕವಿತಾ ರವರು ವಹಿಸಿದ್ದರು. ಐಕ್ಯೂಎಸ್ಸಿ ಸಂಚಾಲಕ ಡಾ.ಬಸವರಾಜು ಸೇರಿದಂತೆ ಅಧ್ಯಾಪಕ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.