Sunday, April 20, 2025
Google search engine

Homeರಾಜಕೀಯಕುಮಾರಸ್ವಾಮಿ ವರದಿ ಸ್ವೀಕರಿಸಲಿಲ್ಲ ಎನ್ನುತ್ತೀರಿ, ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ, ವರದಿ ಸ್ವೀಕರಿಸಿ: ಸಿಎಂಗೆ...

ಕುಮಾರಸ್ವಾಮಿ ವರದಿ ಸ್ವೀಕರಿಸಲಿಲ್ಲ ಎನ್ನುತ್ತೀರಿ, ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ, ವರದಿ ಸ್ವೀಕರಿಸಿ: ಸಿಎಂಗೆ ಹೆಚ್’ಡಿಕೆ ಸವಾಲು

ರಾಮನಗರ: ಲೋಕಸಭೆ ಚುನಾವಣೆ ವರೆಗೂ ಈ ಸರಕಾರ ಜಾತಿಗಣತಿ ನಾಟಕ ಆಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.

ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಜಾತಿ ಗಣತಿ ವರದಿಯನ್ನು ಸರಕಾರ ಇನ್ನೂ ನಾಲ್ಕು ತಿಂಗಳು ಅಧ್ಯಯನ ಮಾಡಲಾಗುವುದು ಎಂದು ಹೇಳುತ್ತಿದೆ. ನನ್ನ ಪ್ರಕಾರ ಲೋಕಸಭೆ ಚುನಾವಣೆ ತನಕ ಇದು ಏನೂ ಆಗಲ್ಲ. ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ. ಈ ಸರಕಾರದ ಕೈಯಲ್ಲಿ ಏನೂ ಆಗಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದೇ ಸಿದ್ದರಾಮಯ್ಯ ಅವರು 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಆ ವರದಿಯನ್ನು ಕುಮಾರಸ್ವಾಮಿ ಸ್ವೀಕರಿಸಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಆಗಲೇ ವರದಿ ಸಿದ್ದವಾಗಿತ್ತಲ್ವಾ? ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ, ಇನ್ನೂ ಯಾಕೆ ವರದಿ ಸ್ವೀಕಾರ ಮಾಡಿಲ್ಲ ಎಂದು ಅವರು ನೇರವಾಗಿ ಸಿದ್ದರಾಮಯ್ಯ ಅವರನ್ನೇ ಪ್ರಶ್ನೆ ಮಾಡಿದರು.

RELATED ARTICLES
- Advertisment -
Google search engine

Most Popular