Sunday, April 20, 2025
Google search engine

Homeಅಪರಾಧಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಸತೀಶ್ ನಾಯ್ಕ (30) ಮೃತಪಟ್ಟ ವ್ಯಕ್ತಿ.

ಪೈಪ್ ಲೈನ್ ಗೆಂದು 11 ಅಡಿ ಗುಂಡಿ ತೋಡಿ ನಡೆಯುತ್ತಿದ್ದ ಕಾಮಗಾರಿ ವೇಳೆ ಗುಂಡಿಗೆ ಇಳಿದಿದ್ದ ಕಾರ್ಮಿಕನ ಮೇಲೆ  ಮಣ್ಣು ಕುಸಿದಿದೆ. ಇದರ ಪರಿಣಾಮ ಕಾರ್ಮಿಕ ಸತೀಶ್ ಮಣ್ಣಿನ ಅವಶೇಷ ಅಡಿಯಲ್ಲಿ ಸಿಕ್ಕಿದ್ದಾನೆ.

ಕೂಡಲೇ ಮಣ್ಣಿನ ಅವಶೇಷಗಳಡಿಯಿಂದ ಆತನನ್ನು ಹೊರ ತೆಗೆಯಲು ಮುಂದಾದ ಕಾರ್ಮಿಕರು ಜೆಸಿಬಿ  ಮೂಲಕ ಕಾರ್ಚಾಚರಣೆ ಪ್ರಾರಂಭಿಸಿದ್ದು, ಈ ವೇಳೆ ಅವಶೇಷಯಡಿಯಲ್ಲಿದ್ದ ಕಾರ್ಮಿಕನ ತಲೆಗೆ  ಜೆಸಿಬಿಯಿಂದ ಪೆಟ್ಟುಬಿದ್ದಿದೆ.

ಈ ಪರಿಣಾಮ  ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ.

RELATED ARTICLES
- Advertisment -
Google search engine

Most Popular