ಮೈಸೂರು: ಆದಿವಾಸಿ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬಂದು ಸರ್ಕಾರದ ಮುಖ್ಯವಾಹಿನಿಗೆ ಬರಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯುಷ್) ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ವಿಭಾಗದ ಮುಖ್ಯಸ್ಥ ಡಾ. ಎಂ. ಸಂದೀಪ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಜನ ಜಾತೀಯ ಗೌರವ್ ದಿವಸದ ಅಂಗವಾಗಿ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಆದಿವಾಸಿ ನಾಯಕ ಬಿರ್ಸಾಮುಂಡಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ೧೮೭೫ರಲ್ಲಿ ಜನಿಸಿದ ಬಿರ್ಸಾಮುಂಡಾರವರು ಹುಟ್ಟು ಹೋರಾಟಗಾರರಾಗಿದ್ದರು ಸಮುದಾಯದ ಏಳಿಗೆಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದಂತಹ ಬಿರ್ಸಾಮುಂಡಾರವರು ಆದರ್ಶ ತತ್ವ ಹೋರಾಟದ ಗುಣಗಳನ್ನು ಪ್ರತಿಯೊಬ್ಬ ಆದಿವಾಸಿಗಳು ಅಳವಡಿಸಿಕೊಳ್ಳಬೇಕು ಎಂದ ಅವರು ಜಿಲ್ಲೆಯಲ್ಲಿರುವ ೨೧ ಆಶ್ರಮ ಶಾಲೆಗಳ ಮಕ್ಕಳಿಗೂ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು.
ಈ ದಿನ ಹೆಚ್.ಡಿ ಕೋಟೆ ತಾಲ್ಲೂಕು ಡಿ.ಬಿ. ಕುಪ್ಪೆ ಆಶ್ರಯ ಶಾಲೆಯ ೩೩ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆ ತರಲಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು ಎಂದ ಅವರು ಪೋಷಕರು ಮಕ್ಕಳ ವಾಕ್ ಮತ್ತು ಶ್ರವಣ ದೋಷದ ಬಗ್ಗೆ ಚಿಕ್ಕ ಮಕ್ಕಳಿದ್ದಾಗಲೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್, ಪ್ರೊ ಡಾ.ಅಜೀಶ್ ಅಬ್ರಹಾಂ, ಡಾ.ರವೀಶ್‌ಗಣಿ, ಡಾ.ಮಹಾದೇವಪ್ಪ, ಡಾ.ಕೆ. ಅರುಣ್‌ರಾಜ್, ಡಾ. ಸಾರಾನ್ಸ್ ಜೈನ್ ಹಾಜರಿದ್ದರು.