Sunday, April 20, 2025
Google search engine

Homeರಾಜ್ಯಸುದ್ದಿಜಾಲಹೈನುಗಾರಿಕೆಯಿಂದ ಕುಟುಂಬದ ನಿರ್ವಹಣೆ: ಶಾಸಕ ಡಿ.ರವಿಶಂಕರ್

ಹೈನುಗಾರಿಕೆಯಿಂದ ಕುಟುಂಬದ ನಿರ್ವಹಣೆ: ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ: ಹೈನುಗಾರಿಕೆ ಮಾಡುವುದರಿಂದ ಕುಟುಂಬದ ನಿರ್ವಹಣೆ ಮಾಡಲು ಸುಲಭವಾಗಿದ್ದು ರೈತರು ಮತ್ತು ಬಡ ಜನತೆ ಹೈನುಗಾರಿಕೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಭಿಗಳಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡ ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಹೈನುಗಾರಿಕೆ ಪ್ರೋತ್ಸಹಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಾಲು ಉತ್ಪಾದಕರಿಗೆ ೫ ರೂ ಪ್ರೋತ್ಸಾಹ ನೀಡುತ್ತಿದೆ ಎಂದರು.

ಹಾಲು ಒಕ್ಕೂಟಕ್ಕೆ ಹೆಚ್ಚು ಹಾಲು ಸರಬರಾಜು ಆಗುತ್ತಿರುವ ಬಗ್ಗೆ ಒಕ್ಕೂಟದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಉತ್ಪಾದಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದ ಶಾಲಾ ಮಕ್ಕಳಿಗೆ ಮತ್ತು ಹಾಲು ಸರಬರಾಜುದಾರರಿಗೆ ಅನುಕೂಲವಾಯಿತು ಎಂದು ಮಾಹಿತಿ ನೀಡಿದರು. ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು ರೈತರು ಬೆಳೆ ನಷ್ಟ ಸೇರಿದಂತೆ ಇತರ ಕಾರಣಗಳಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಸರ್ಕಾರದ ಸವಲತ್ತುಗಳನ್ನು ಕೊಡಿಸಲು ಶಾಸಕನಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ಹಾಲು ಉತ್ಪಾದಕರ ಮಕ್ಕಳು ಉನ್ನತ ವ್ಯಸಂಗ ಮಾಡಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ೭೦ ಮಂದಿಗಾಗಿ ತೆರೆಯಲಾಗಿದ್ದ ವಿದ್ಯಾರ್ಥಿ ನಿಲಯವನ್ನು ಮೇಲ್ದರ್ಜೆಗೇರಿಸಲಾಗಿದ್ದು ೨೫೦ ಮಕ್ಕಳಿಗೆ ಸುಸಜ್ಜಿತವಾದ ನಿಲಯ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಹೇಳಿದರು.
ಮೈಮುಲ್‌ಗೆ ದಿನಕ್ಕೆ ೮ ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದ್ದು ಇದನ್ನು ೧೦ ಲಕ್ಷಕ್ಕೇ ಏರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದ ಅಧ್ಯಕ್ಷ ಪಿ.ಎಂ.ಪ್ರಸನ್ನ ಹಾಲು ಉತ್ಪಾದಕರಿಗೆ ಮತ್ತು ಹಸುಗಳಿಗೆ ವಿಮೆ ಮಾಡಿಸಲಾಗಿದ್ದು ರೈತರಿಗೆ ಅನುಕೂಲವಾಗುವಂತಹಾ ಎಲ್ಲಾ ರೀತಿಯ ಸವಲತ್ತುಗಳನ್ನು ಮೈಮುಲ್ ವತಿಯಿಂದ ಪ್ರಾಮಾಣಿಕವಾಗಿ ವಿತರಿಸಲಾಗುತ್ತದೆ ಎಂದರು. ಹಾಲು ಸೇರಿದಂತೆ ಇತರ ಉತ್ದದನೆಗಳನ್ನು ಪ್ಯಾಕೇಜ್ ಮಾಡಲು ಬೇಕಾಗುವಂತಹಾ ಟೇಟ್ರಾಪ್ಯಾಕ್ ತಯಾರಿಸಲು ಮೈಮುಲ್ ವತಿಯಿಂದ ೧೨೦ ಕೋಟಿ ರೂಗಳಲ್ಲಿ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದ ಅಧ್ಯಕ್ಷರು ಇದರ ಜತೆಗೆ ಪಿರಿಯಾಪಟ್ಟಣದಲ್ಲಿ ಪಶು ಆಹಾರ ಘಟಕ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹೆಬ್ಬಾಳು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹೆಚ್.ಬಿ.ಸಂದೇಶ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಉಪವ್ಯವಸ್ಥಾಪಕ ಜಿ.ಎನ್.ಸಂತೋಷ್, ನಿವೃತ್ತ ವ್ಯವಸ್ಥಾಪಕ ಸಣ್ಣತಮ್ಮೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘ ಸುಮಾರು ೪೦ ವರ್ಷಗಳ ಕಾಲ ಉತ್ತಮವಾಗಿ ನಡೆಸಲು ಸಹಕಾರ ನೀಡಿದ ಗ್ರಾಮದ ಯಜಮಾನರುಗಳನ್ನು ಸನ್ಮಾನಿಸಲಾಯಿತು.

ಮೈಮುಲ್ ಸಹಾಯಕ ವ್ಯವಸ್ಥಾಪಕ ಡಾ.ಪ್ರವೀಣ್ ಪತ್ತಾರ್, ಕಟ್ಟಡದ ಇಂಜಿನಿಯರ್ ರುದ್ರಶೇಖರ್, ಗ್ರಾಮದ ವಿಎಸ್‌ಎಸ್‌ಎನ್ ಅಧ್ಯಕ್ಷ ಹೆಚ್.ಆರ್.ಬಾಲಕೃಷ್ಣ(ಬಾಲು), ನಿರ್ದೇಶಕ ಹೆಚ್.ಹೆಚ್.ನಾಗೇಂದ್ರ, ಸಂಘದ ಉಪಾಧ್ಯಕ್ಷ ಸೋಮಶೇಖರ್, ನಿರ್ದೇಶಕರಾದ ಹೆಚ್.ಎಸ್.ಗಿರೀಶ್, ಮಂಜುನಾಥ್, ಸೋಮೇಗೌಡ, ಹೆಚ್.ಯು.ಪುನೀತ್, ಸುಬ್ಬೇಗೌಡ, ರಾಘವೇಂದ್ರ, ಟಿ.ಶಂಕರ್, ಸರ್ವಮಂಗಳ, ರೇಖಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಸುರೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್, ಸದಸ್ಯ ವೆಂಕಟರಾಮು, ಮಾಜಿ ಅಧ್ಯಕ್ಷ ಪುಟ್ಟೇಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೆಚ್.ಪಿ.ಪರಶುರಾಮ್, ಯುವಕಾಂಗ್ರೇಸ್ ಮುಖಂಡ ಅಪ್ಪಿ ಪ್ರಶನ್ನ
ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular