ಹುಣಸೂರು: ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಮೊದಲು ಗುಣಮಟ್ಟ ಶಿಕ್ಷಣ ಇರುವ ಕಡೆ ದಾಖಲಿಸಬೇಕು ಎಂದು ಪೋಷಕರಿಗೆ ಹುಣಸೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್ ಸಲಹೆ ನೀಡಿದರು.
ನಗರದ ಎನ್. ಇ.ಎಸ್. ಕಾಲೊನಿಯಲ್ಲಿರು ಉನ್ನತಿ ಅಕಾಡೆಮಿ ಶಾಲೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಪ್ರತಿಷ್ಠೆ ಗಾಗಿ ಪೋಷಕರು ಖಾಸಗಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೂ ಯಾವುದೇ ಶಾಲೆ ಇರಲಿ ಅಲ್ಲಿಯ ಶಿಕ್ಷಣ, ಪರಿಸರದ ಕಡೆ ಗಮನಹರಿಸುವ ಅವಶ್ಯಕತೆ ಇದೆ ಎಂದರು.
ಉನ್ನತಿ ಅಕಾಡೆಮಿ ಶಾಲೆಯಲ್ಲಿ ಭಾರತೀಯ ಸಾಂಸ್ಕೃತಿಯ ಉಳಿಸುವ ಹಾಗೂ ಎಲ್ಲಾ ಧರ್ಮದ ಹಬ್ಬಗಳಾದ ದೀಪಾವಳಿ, ರಂಜಾನ್, ಕ್ರಿಸ್ಮಸ್, ಜೈನ್ ಹೀಗೆ ಶಾಲೆಯ ಒಂದೇ ಕಡೆ ಆಚರಿಸುವುದರ ಜತೆಗೆ. ಕುವೆಂಪು ರವರ ವಿಶ್ವಮಾನವ ಸಂದೇಶವನ್ನು ಸಾರುವ ಸನಿವೇಶ ಪ್ರಯತ್ನ ವಿಭಿನ್ನವಾಗಿರುವುದು ಪ್ರಶಂಸನೀಯವೆಂದರು.
ವಿಶೇಷವಾಗಿ ಮಕ್ಕಳ ಜತೆಗೆ ಫೋಷಕರಿಗೂ ಕ್ರೀಡಾ ಕೂಟ ನಡೆಸಿ ಎಲ್ಲರಿಗೂ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಹೆಚ್.ಡಿ.ತೇಜಸ್ವಿ, ಅಧ್ಯಕ್ಷ ಹೆಚ್.ಬಿ.ಧರ್ಮಪ್ಪ ಹಾಗೂ ಶಿಕ್ಷಕಿ, ಮಕ್ಕಳು, ಪೋಷಕರು ಇದ್ದರು