Sunday, April 20, 2025
Google search engine

Homeಸಿನಿಮಾನ.27 ರಂದು ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಪ್ರೀಕ್ವೆಲ್‌ ಫಸ್ಟ್ ಲುಕ್ ರಿಲೀಸ್

ನ.27 ರಂದು ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಪ್ರೀಕ್ವೆಲ್‌ ಫಸ್ಟ್ ಲುಕ್ ರಿಲೀಸ್

ಬೆಂಗಳೂರು: ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್‌ (ಹಿಂದಿನ ಕಥೆ)ನ ಫಸ್ಟ್‌ ಲುಕ್‌ ಇದೇ 27 ರಂದು ಬಿಡುಗಡೆಯಾಗಲಿದೆ

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಶನಿವಾರ  ಮಾಹಿತಿ ನೀಡಿದೆ.

ರಿಷಬ್‌ ಶೆಟ್ಟಿ ಬರೆದು ನಿರ್ದೇಶನ ಮಾಡಿರುವ ‘ಕಾಂತಾರ’ ತುಳುನಾಡಿನ ದೈವದ ಆಚರಣೆ ಹಾಗೂ ಸಂಪ್ರದಾಯದ ಸುತ್ತ ಸಾಗಿದ ಕಥೆಯನ್ನು ಒಳಗೊಂಡಿತ್ತು. ಕನ್ನಡದಲ್ಲಿ ಬಿಡುಗಡೆಯಾಗಿ ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಹೊಸ ಬಾಳೆ ಫಿಲ್ಮ್ಸ್ ನ ‘ಕಾಂತಾರ’ ಬಾಕ್ಸ್ ಆಫೀಸ್‌ ನಲ್ಲಿ 400 ಕೋಟಗೂ ಅಧಿಕ ಗಳಿಕೆ ಕಂಡಿತ್ತು.

ಮೊದಲ ಭಾಗ ಹಿಟ್ ಆದ ಬಳಿಕ ಸಿನಿಮಾದ ಎರಡನೇ ಭಾಗ ಅಂದರೆ ಪ್ರೀಕ್ವೆಲ್ ರಿಲೀಸ್ ಮಾಡುವುದಾಗಿ ರಿಷಬ್ ಸಿನಿಮಾದ ಶತದಿನದ ಸಂಭ್ರಮದಂದು ಹೇಳಿದ್ದರು. ಅದರಂತೆ ಸ್ಕ್ರಿಪ್ಟ್ ಹಾಗೂ ಲೋಕೇಷನ್ ಹುಡುಕಾಟದ ಬಳಿಕ ಸಿನಿಮಾದ ಬಗ್ಗೆ ಒಂದೊಂದು ಅಪ್ಡೇಟ್ ಗಳು ನಿಧಾನವಾಗಿ ಬರುತ್ತಲೇ ಹೋಯಿತು.

ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಹುಟ್ಟು ಹಾಗೂ ಮೂಲದ ಕಥೆ ಇರಲಿದೆ ಎನ್ನಲಾಗಿದೆ.

ಇದೇ ತಿಂಗಳ ಕೊನೆಯಲ್ಲಿ ಸಿನಿಮಾದ ಮುಹೂರ್ತ ಉಡುಪಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಮಾತು ಚರ್ಚೆಯಲ್ಲಿರುವಾಗಲೇ ಇದೀಗ ಹೊಂಬಾಳೆ ಫಿಲ್ಮ್ಸ್ ಸಿನಿಮಾದ ಫಸ್ಟ್ ರಿಲೀಸ್ ಮಾಡುವ ದಿನಾಂಕವನ್ನು ರಿವೀಲ್ ಮಾಡಿದೆ.

ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದೆ.

ನ.27 ರಂದು ಮಧ್ಯಾಹ್ನ 12:25 ರಂದು ಫಸ್ಟ್‌ ಲುಕ್ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

RELATED ARTICLES
- Advertisment -
Google search engine

Most Popular