Monday, April 21, 2025
Google search engine

Homeರಾಜ್ಯಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್​ ಹೆಗ್ಡೆ ಮರು ನೇಮಕ

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್​ ಹೆಗ್ಡೆ ಮರು ನೇಮಕ

ಬೆಂಗಳೂರು: ಎರಡು ತಿಂಗಳ ಅವಧಿಗೆ (2024 ಜನವರಿ 31ರವರೆಗೆ) ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್​ ಹೆಗ್ಡೆ ಅವರನ್ನು ಮರುನೇಮಕಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ವಿಸ್ತರಣೆಗೆ ಅವಕಾಶವಿಲ್ಲದ ಕಾರಣ ಹಾಲಿ ಅಧ್ಯಕ್ಷರನ್ನೇ ಮರುನೇಮಕ ಮಾಡಲಾಗಿದೆ. ಇವರ ಜೊತೆಗೆ ಐವರು ಸದಸ್ಯರನ್ನು ಮರು ನೇಮಕ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿ ನವೆಂಬರ್​ 26ಕ್ಕೆ ಅಂತ್ಯವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿದೆ. ಜಾತಿಗಣತಿ ವರದಿ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಕಾಂತರಾಜು ವರದಿ ಹೆಸರು ಮರುನಾಮಕರಣ ಮಾಡಿ, ಡಾ.ಜಯಪ್ರಕಾಶ್ ಹೆಗ್ಡೆ ವರದಿ ಅಂತಾ ಬದಲಾಯಿಸಲಾಗಿದೆ.

ಇತ್ತೀಚೆಗೆ ಜಾತಿ ಗಣತಿ ವರದಿಯ ಮೂಲ ಪ್ರತಿ ಕಾಣೆಯಾಗಿದ್ದು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ನಂತರ ಈ ಕುರಿತಾಗಿ ಅವರು ಸ್ಪಷ್ಟನೆ ನೀಡಿದ್ದು, ಮೂಲ ಪ್ರತಿ ಅಂದರೆ ದತ್ತಾಂಶ ಅಲ್ಲ. ದತ್ತಾಂಶ ಎಲ್ಲವೂ ಸುರಕ್ಷಿತವಾಗಿದೆ. ಇಂದಿನ ಸದಸ್ಯರು, ಅಧ್ಯಕ್ಷರು ಹಾಗೂ ಸೆಕ್ರೆಟರಿ ಸಹಿ ಇರುವ ದತ್ತಾಂಶ, ಹಾರ್ಡ್ ಕಾಪಿ ಮತ್ತು ಪ್ರಿಂಟೆಡ್ ಕಾಪಿಯೂ ಇದೆ. ಕಾಂತರಾಜು ವರದಿಯ ಮೂಲ ಪ್ರತಿಯ ಕೆಲ ವರ್ಕ್​ ಶೀಟ್ ​ಗಳು ಸಿಗುತ್ತಿಲ್ಲ ಎಂದು ಹೇಳಿದ್ದರು.

RELATED ARTICLES
- Advertisment -
Google search engine

Most Popular