Monday, April 21, 2025
Google search engine

Homeರಾಜ್ಯಮೊಬೈಲ್ ಕದ್ದ ಬಾಲಕನನ್ನು ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿದ ಮಾಲೀಕ

ಮೊಬೈಲ್ ಕದ್ದ ಬಾಲಕನನ್ನು ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿದ ಮಾಲೀಕ

ರಾಮನಗರ: ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿರುವ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ.

ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಆಟ ಆಡಲು ಬಂದ ಬಾಲಕ ಜೋಕಾಲಿ ಆಡುತ್ತಲೇ ಮಾಲೀಕನ ಮೊಬೈಲ್​ ಕದ್ದು ಪರಾರಿಯಾಗಲು ಯತ್ನಿಸಿದ್ದ. ಆಗ ಮೊಬೈಲ್ ಎಲ್ಲಿ ಅಂತ ಹುಡುಕಾಡುತ್ತಿರುವಾಗ ಬಾಲಕನ ಜೇಬಿನಲ್ಲಿ ಮೊಬೈಲ್ ರಿಂಗ್ ಆಗಿದೆ.

ಇದರಿಂದ ತನ್ನದೆ ಮೊಬೈಲ್ ಎಂದು ಗುರುತು ಹಿಡಿದ ಜೋಕಾಲಿ ಮಾಲೀಕ ಬಾಲಕನನ್ನು ಬಿಲ್​​ ಕೊಡುವ ಕೊಠಡಿಯಲ್ಲಿ ಕೂಡಿಹಾಕಿ ಸರಪಳಿಯಿಂದ ಲಾಕ್ ​ಮಾಡಿ, ಅನ್ನ, ನೀರು ಕೊಡದೆ ಶಿಕ್ಷೆ ನೀಡಿದ್ದಾನೆ.

ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಬಾಲಕನ ತಪ್ಪಿಗೆ ಕ್ಷಮಿಸುವಂತೆ ಕೋರಿ ಬಿಟ್ಟು ಕಳುಹಿಸಲು ಮನವಿ ಮಾಡಿದ್ದಾರೆ. ಕೊನೆಗೆ ಸ್ಥಳೀಯರ ಮನವಿಯಂತೆ ಮಾಲೀಕ ಬಾಲಕನನ್ನ ಬಿಟ್ಟು ಕಳುಹಿಸಿದ್ದಾನೆ.

ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular