ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳ ಒಕ್ಕಲಿಗರ ನೌಕರರ ಸ್ನೇಹ ಬಳಗದ ನೂತನ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಲಕ್ಕಿಕುಪ್ಪೆ ಶಂಕರೇಗೌಡ ಆಯ್ಕೆಯಾಗಿದ್ದಾರೆ.
ಕೆ.ಆರ್.ನಗರ ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ನೌಕರರ ಸಭೆಯಲ್ಲಿ ಇವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಇನ್ನು ಒಕ್ಕಲಿಗರ ಸ್ನೇಹ ಬಳಗದ ಪ್ರಧಾನ ಕಾರ್ಯದರ್ಶಿ ಯಾಗಿ ಶಿಕ್ಷಣ ಇಲಾಖೆಯ ಹೆಬ್ಬಾಳು ಈಶ್ವರ್ ಮತ್ತು ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಆನಂದ್ ಕಿತ್ತೂರು ಅವರನ್ನು ಆಯ್ಕೆ ಮಾಡಲಾಯಿತು.
ನಂತರ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್, ಸಂಘದ ಮೂಲಕ ಜನಮುಖಿ ಸೇವಾ ಕಾರ್ಯಗಳನ್ನು ಮಾಡುವುದ ಜೊತಗೆ ಸಮುದಾಯದ ನೌಕರರ ಹಿತಕಾಯಲು ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ನಾರಾಯಣ್ ಪ್ರಸಾದ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಡ್ಡರಕೊಪ್ಪಲು ಶಿವರಾಮಣ್ಣ ಬಳಗದ ಅಭಿವೃದ್ದಿ,ಒಗ್ಗಟ್ಟು ಮತ್ತು ಸಾರ್ವಜನಿಕ ಸೇವೆಯ ಕುರಿತು ಮಾತನಾಡಿದರು.
ಡಿಸೆಂಬರ್ ತಿಂಗಳಲ್ಲಿ ಒಕ್ಕಲಿಗರ ನೌಕರರ ಸ್ನೇಹ ಬಳಗದ ವತಿಯಿಂದ ರಾಷ್ಟಕವಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಅಚರಿಸಿ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಇದಕ್ಕೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿ.
ಲಕ್ಕಿಕುಪ್ಪೆ ಶಂಕರೇಗೌಡ, ಅಧ್ಯಕ್ಷರು, ಒಕ್ಕಲಿಗ ನೌಕರರ ಸ್ನೇಹಬಳಗ
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಅವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ಅರವಿಂದ್, ಪ್ರಥಮಿಕ ಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಮಾರೇಗೌಡ, ಪ್ರಾ, ಶಾ, ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಸಂಗರಶೆಟ್ಟಹಳ್ಳಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎಸ್.ಎಲ್.ರವಿ,ಎನ್.ಪಿ.ಎಸ್ ನೌಕರರ ತಾಲೂಕು ಅಧ್ಯಕ್ಷ ಶಶಿಕಿರಣ್, ಬಳಗದ ನಿಕಟಪೂರ್ವ ಅಧ್ಯಕ್ಷ ಎಚ್.ಟಿ.ಮಂಜು, ಕಾರ್ಯದರ್ಶಿ ಕೆ.ಇ.ರಾಜೇಶ್,ಖಜಾಂಚಿ ಮಾರುತಿ, ಸಿ.ಆರ್.ಪಿಗಳಾದ ಪ್ರಸಾದ್ ಸಾಲೇಕೊಪ್ಪಲು,ರವಿ BIERT ನಾಗರಾಜು ಜಿಕೆ, ಮುಖ್ಯಶಿಕ್ಷಕರಾದ ರಮೇಶ್, ಸಿದ್ದೇಗೌಡ, ಶಿಕ್ಷಕರಾದ ಕುಮಾರ್ ಶೀಗವಾಳು, ಮಂಜೇಗೌಡ ಬೂದನೂರು ಹರೀಶ್ ಶ್ರೀರಾಂಪುರ, ಮುಲುವೇಗೌಡ, ರಂಗಪ್ಪ, ಕೆ.ಟಿ.ಸ್ವಾಮಿ, ಎಸ್.ಆರ್.ಪಾಲಾಕ್ಷ, ಹನಸೋಗೆ ಜಗದೀಶ್, ನಿವೃತ್ತ ಶಿಕ್ಷಕ ಮುದ್ದೇಗೌಡ, ಬಿಐಇಆರ್ ಟಿ ನಾಗರಾಜು, ಕೃಷಿ ಅಧಿಕಾರಿ ಗಣೇಶ್, ಅಬಕಾರಿ ಇಲಾಖೆಯ ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.